ಜೋಧ್ಪುರ:'ಮಿಂಚಿನ ವೇಗದಲ್ಲಿ ಸಂಭವಿಸಿದ ಘಟನೆ ಅದು, ಆಅಪಘಾತತೀವ್ರ ನೋವುಂಟು ಮಾಡಿದ್ದು, ತಪ್ಪಿತಸ್ಥನೆಂಬ ಭಾವನೆ ನನ್ನ ಕಾಡುತ್ತಿದೆ'ಎಂದು ಭಾರತದ ವೇಗದ ತಾರೆ (ರೇಸ್ ಕಾರು ಚಾಲಕ)ಗೌರವ್ ಗಿಲ್ ತಿಳಿಸಿದ್ದಾರೆ.

ಪ್ರಜಾವಾಣಿಯೊಂದಿಗೆ ಮಾತನಾಡಿದ ಅವರು ರಾಷ್ಟ್ರೀಯ ರ್ಯಾಲಿ ಚಾಂಪಿಯನ್ಷಿಪ್ನಲ್ಲಿ ಸಂಭವಿಸಿದ ಅವಘಡದಿಂದಇನ್ನು ನಾನು ಚೇತರಿಸಿಕೊಂಡಿಲ್ಲ ಎಂದುಹೇಳಿದ್ದಾರೆ.

ರಾಜಸ್ತಾನದಬಾರ್ಮೆರ್ನಲ್ಲಿ ಆಯೋಜಿಸಿದ್ದರಾಷ್ಟ್ರೀಯ ರ್ಯಾಲಿ ಚಾಂಪಿಯನ್ಷಿಪ್ನಲ್ಲಿ ಸಂಭವಿಸಿದಟ್ರ್ಯಾಕ್ದುರಂತದಲ್ಲಿಗೌರವ್ ಗಿಲ್ ಅವರ ಕಾರು ಅಪಘಾತಕ್ಕೆಒಳಗಾಗಿ ಮೂವರು ಸಾವಿಗೀಡಾಗಿದ್ದರು.

ಇದನ್ನೂ ಓದಿ:ಗೌರವ್ ಗಿಲ್ ಕಾರು ದುರಂತ: 3 ಸಾವು

ರ್ಯಾಲಿಯ ಮೂರನೇ ಸುತ್ತಿನ ಸ್ಪರ್ಧೆಯಲ್ಲಿ ಗೌರವ್ ಗಿಲ್ ಗಂಟೆಗೆ 160ಕಿಲೋಮೀಟರ್ ವೇಗದಲ್ಲಿ ಮುನ್ನುಗ್ಗುತ್ತಿದ್ದರು. ಎಡಕ್ಕೆ ತಿರುಗುವ ಸಂದರ್ಭದಲ್ಲಿ ಭದ್ರತೆಯನ್ನು ಭೇದಿಸಿ ಬೈಕ್ ಸವಾರನೊಬ್ಬ ಟ್ರ್ಯಾಕ್ ಒಳಗೆ ನುಗ್ಗಿದ್ದಾನೆ. ಟ್ರ್ಯಾಕ್ ಸಮೀಪ ನಿಂತಿದ್ದ ನರೇಂದ್ರ, ಅವರ ಪತ್ನಿ ಪುಷ್ಪಾ ಮತ್ತು ಪುತ್ರ ಜಿತೇಂದ್ರ ಅವರಿಗೆ ಕಾರು ಅಪ್ಪಳಿಸಿದ್ದರಿಂದ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದರು.

ಈ ಅಪಘಾತ ಮಿಂಚಿನ ವೇಗದಲ್ಲಿ ಸಂಭವಿಸಿತ್ತು.ಕಾರನ್ನು ನಿಯಂತ್ರಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದೆ, ಆದರೆ ಕಾರುಅತಿವೇಗದಲ್ಲಿ ಇದ್ದ ಕಾರಣ ಫಲ ಸಿಗಲಿಲ್ಲ, ಆಗ ಎಲ್ಲವೂ ನನ್ನ ಕೈ ಮೀರಿ ಹೋಗಿತ್ತು ಎಂದು ಗಿಲ್ ವಿಷಾಧ ವ್ಯಕ್ತಪಡಿಸಿದರು.

ಟ್ರ್ಯಾಕ್ನಲ್ಲಿನಾನುಸಾಕಷ್ಟು ಅಪಘಾತಗಳನ್ನು ನೋಡಿದ್ದೇನೆ, ಆದರೆ ಈ ಘಟನೆ ನನ್ನ ಜೀವನದಲ್ಲಿ ಮರೆಯಲಾಗದ ಘಟನೆಯಾಗಿದೆ ಎಂದಿದ್ದಾರೆ.

ಈ ಘಟನೆ ನಡೆದ ಬಳಿಕ ನಾನು ನಾಪತ್ತೆಯಾಗಿದ್ದೆ ಎಂದು ಕೆಲವರು ಅಪಪ್ರಚಾರ ಮಾಡಿದ್ದರು, ನಾನು ಎಲ್ಲಿಯೂ ಹೋಗಿರಲಿಲ್ಲ, ಅಲ್ಲಿಯೇ ಇದ್ದೆ, ಸಂಜೆ ದೆಹಲಿಗೆ ಬಂದಿದ್ದರೂ ಘಟನೆಯ ಬಗ್ಗೆ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೆ ಎಂದು ಅವರು ಹೇಳಿದ್ದಾರೆ.

ಭವಿಷ್ಯದಲ್ಲಿ ಇಂತಹ ಘಟನೆಗಳು ಜರುಗದಂತೆ ಸೂಕ್ತಬಿಗಿ ಭದ್ರತೆಕಲ್ಪಿಸುವ ವ್ಯವಸ್ಥೆಯನ್ನು ಆಯೋಜಕರು ಮಾಡಬೇಕಿದೆ. ಅಂದು ಬೈಕ್ ಸವಾರ ಭದ್ರತೆ ಸೀಳಿಕೊಂಡು ಟ್ರ್ಯಾಕ್ಗೆ ಬರದಿದ್ದರೆ ಆ ಘಟನೆ ಸಂಭವಿಸುತ್ತಿರಲಿಲ್ಲ. ಇಂತಹ ಟೂರ್ನಿಗಳಲ್ಲಿ ಸಾರ್ವಜನಿಕರು ಟ್ರ್ಯಾಕ್ ಒಳಗೆ ಬರಬಾರದು ಹಾಗೂ ಪೊಲೀಸರ ಸೂಚನೆಗಳನ್ನು ಪಾಲನೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.