ಕೊಯಮತ್ತೂರು: ಕರ್ನಾಟಕದ ಮೋಟರ್ಸ್ಪೋರ್ಟ್ ಪಟು ಐಶ್ವರ್ಯ ಪಿಸ್ಸೆ ಅವರು ರಾಷ್ಟ್ರೀಯ ರ್ಯಾಲಿ ಚಾಂಪಿಯನ್ಷಿಪ್ನಲ್ಲಿ ಸತತ ಐದನೇ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ತಮಿಳುನಾಡಿನ ಕೇತನೂರಿನಲ್ಲಿ ನಡೆದ ಚಾಂಪಿಯನ್ಷಿಪ್ನಲ್ಲಿ ಟಿವಿಎಸ್ ತಂಡದ ಚಾಲಕಿ, ಬೆಂಗಳೂರಿನ ಐಶ್ವರ್ಯ ಅವರಿಗೆ ಒಟ್ಟಾರೆ ಎಂಟನೇ ಪ್ರಶಸ್ತಿ ಒಲಿಯಿತು. ಕೊಯಮತ್ತೂರು ಆಟೊ ಸ್ಪೋರ್ಟ್ಸ್ ಕ್ಲಬ್ ಮತ್ತು ಗಾಡ್ ಸ್ಪೀಡ್ ರೇಸಿಂಗ್, ದ್ವಿಚಕ್ರವಾಹನ ಚಾಲಕರಿಗಾಗಿ ಈ ಸ್ಪರ್ಧೆ ಆಯೋಜಿಸಿತ್ತು.

2019ರ ವಿಶ್ವಕಪ್ ವಿಜೇತ ಐಶ್ವರ್ಯ, ಇಲ್ಲಿ ನಡೆದ ರ್ಯಾಲಿಯ ಎಲ್ಲ ನಾಲ್ಕು ಹಂತಗಳಲ್ಲಿ ಭರ್ಜರಿ ಜಯ ಸಾಧಿಸಿದರು.

ಈ ವರ್ಷದ ಆರಂಭದಲ್ಲಿ ಜೋರ್ಡಾನ್ನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಎರಡನೇ ಸುತ್ತಿನ ವೇಳೆ ಐಶ್ವರ್ಯ ಚಾಲನೆ ಮಾಡುತ್ತಿದ್ದ ಬೈಕ್ ಅಪಘಾತಕ್ಕೀಡಾಗಿತ್ತು.ಎರಡೂ ಮಣಿಕಟ್ಟಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಚೇತರಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.