ವುಹಾನ್, ಚೀನಾ: ಭಾರತದ ಅಮಿತ್ ಪಂಘಲ್ ಸಿಐಎಸ್ಎಮ್ ವಿಶ್ವ ಮಿಲಿಟರಿ ಕ್ರೀಡಾಕೂಟದ ಬಾಕ್ಸಿಂಗ್ನಲ್ಲಿ ಕ್ವಾರ್ಟರ್ಫೈನಲ್ಗೆ ಕಾಲಿಟ್ಟಿದ್ದಾರೆ. ಇಲ್ಲಿ ನಡೆಯುತ್ತಿರುವ ಕೂಟದಲ್ಲಿ ಸೋಮವಾರಅವರು, 52 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಟ್ಯುನಿಷಿಯಾದ ಬೌನ್ಮಿ ಬಿಲೆಲ್ ಅವರನ್ನು 4–1ರಿಂದ ಮಣಿಸಿದರು.

49 ಕೆಜಿ ವಿಭಾಗದಲ್ಲಿ ದೀಪಕ್ ಅವರು ವಿಯೆಟ್ನಾಂನ ಗುಯೆನ್ ಲಿನ್ ಫುಂಗ್ ಎದುರು 5–0ಯಿಂದ ಗೆದ್ದು ಎಂಟರ ಘಟ್ಟ ತಲುಪಿದರು. ಚಿರಾಗ್ 56 ಕೆಜಿ ವಿಭಾಗದಲ್ಲಿ ವೆನೆಜುವೆಲಾದ ಬೊನಿಲ್ಲಾ ಜೊಯಿನೆನ್ ಎದುರು 5–0ಯಿಂದ ಜಯ ಸಾಧಿಸಿ ಮುನ್ನಡೆದರು.

91 ಕೆಜಿ ಸೂಪರ್ ಹೆವಿವೇಟ್ ವಿಭಾಗದಲ್ಲಿ ಭಾರತಕ್ಕೆ ನಿರಾಸೆ ಕಾದಿತ್ತು. ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಂಜೀತ್, 32ರ ಘಟ್ಟದ ಬೌಟ್ನಲ್ಲಿ ಚೀನಾದ ವಾಂಗ್ ಜಿಯಾಬೊ ಎದುರು 0–5ರಿಂದ ಶರಣಾದರು.

109 ದೇಶಗಳಿಂದ ಒಟ್ಟು 9,308 ಮಂದಿ ಇಲ್ಲಿ ಸ್ಪರ್ಧಿಸಿದ್ದಾರೆ. ಕ್ರೀಡಾಕೂಟದ ಇತಿಹಾಸದಲ್ಲಿ ಇಷ್ಟೊಂದು ಸ್ಪರ್ಧಿಗಳು ಭಾಗವಹಿಸಿದ್ದು ದಾಖಲೆಯಾಗಿದೆ. ಆರ್ಚರಿ, ಬಾಕ್ಸಿಂಗ್, ಡೈವಿಂಗ್, ಶೂಟಿಂಗ್ ಸೇರಿ 9 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.