ಸ್ಟ್ಯಾವೆಂಜರ್, ನಾರ್ವೆ: ಭಾರತದ ವಿಶ್ವನಾಥನ್ ಆನಂದ್ ಇಲ್ಲಿ ನಡೆದ ಚೆಸ್ ಟೂರ್ನಿಯ ಬ್ಲಿಟ್ಜ್ ವಿಭಾಗದಲ್ಲಿ ವಿಶ್ವ ಚಾಂಪಿಯನ್, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಸೋಲುಣಿಸಿದರು.

ಮಾಜಿ ವಿಶ್ವ ಚಾಂಪಿಯನ್ ಆನಂದ್, ಏಳನೇ ಸುತ್ತಿನಲ್ಲಿ ಕಾರ್ಲ್‌ಸನ್ ಅವರನ್ನು ಮಣಿಸಿದರೂ, ನಾಲ್ಕನೇ ಸ್ಥಾನ ಗಳಿಸಿದರು.

ನೆದರ್ಲೆಂಡ್ಸ್‌ನ ಅನೀಶ್ ಗಿರಿ ಮತ್ತು ಫ್ರಾನ್ಸ್‌ನ ಮ್ಯಾಕ್ಸಿಮ್ ವಾಚಿರ್ ಲ್ಯಾಗ್ರೇವ್ ಎದುರು ಕ್ರಮವಾಗಿ ನಾಲ್ಕು ಮತ್ತು ಒಂಬತ್ತನೇ ಸುತ್ತುಗಳಲ್ಲಿ ಆನಂದ್ ಸೋಲನುಭವಿಸಿದರು.

IPL 2022: ಫೈನಲ್ ಪಂದ್ಯದಲ್ಲಿ ಕೆಜಿಎಫ್ 2 ಹಾಡಿಗೆ ಕುಣಿದು ಸಂಭ್ರಮಿಸಿದ ಜನ

10 ಆಟಗಾರರು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ಭಾರತದ ಆಟಗಾರ ಐದು ಪಾಯಿಂಟ್ಸ್ ಗಳಿಸಿದರು. 6.5 ಪಾಯಿಂಟ್ಸ್ ಕಲೆಹಾಕಿದ ಅಮೆರಿಕದ ವೇಸ್ಲಿ ಅಗ್ರಸ್ಥಾನ ಗಳಿಸಿದರು.

ಇತ್ತೀಚೆಗೆ ನಡೆದ ಆನ್‌ಲೈನ್ ಬ್ಲಿಟ್ಜ್ ಟೂರ್ನಿಯಲ್ಲಿ ಭಾರತದ ಆರ್. ಪ್ರಜ್ಞಾನಂದ ಅವರು ಕಾರ್ಲ್‌ಸನ್ ಅವರನ್ನು ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.