ನವದೆಹಲಿ: ಭಾರತದ ಶೂಟರ್ಗಳು 15ನೇ ಏಷ್ಯನ್ ಏರ್ಗನ್ ಚಾಂಪಿಯನ್ಷಿಪ್ನಲ್ಲಿ ಶುಕ್ರವಾರ ಎರಡು ಚಿನ್ನ ಗೆದ್ದರು. ಇದರೊಂದಿಗೆ ಒಟ್ಟು 25 ಸ್ವರ್ಣ ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದರು.

ಕೊರಿಯಾದ ಡೇಗುನಲ್ಲಿ ನಡೆದ ಟೂರ್ನಿಗೆ ಶುಕ್ರವಾರ ಕೊನೆಯ ದಿನ ವಾಗಿತ್ತು. ಭಾರತದ ಮನು ಭಾಕರ್, ಸಾಮ್ರಾಟ್ ರಾಣಾ ಅವರು 10 ಮೀಟರ್ಸ್ ಏರ್ ಪಿಸ್ತೂಲ್ ಮಿಶ್ರ ಜೂನಿಯರ್ ತಂಡ ವಿಭಾಗದಲ್ಲಿ ಮತ್ತು ರಿಧಮ್ ಸಂಗ್ವಾನ್ ಮತ್ತು ವಿಜಯ್ವೀರ್ ಸಿಧು ಇದೇ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ಚಿನ್ನದ ಪದಕಗಳಿಗೆ ಮುತ್ತಿಟ್ಟರು.

ಫೈನಲ್ನಲ್ಲಿ ರಿಧಮ್ ಮತ್ತು ವಿಜಯವೀರ್ ಜೋಡಿಯು17-3ರಿಂದ ಕಜಕಸ್ತಾನದ ವಲೆರಿಯ ರಕೀಮ್ಜಾನ್ ಮತ್ತು ಐರಿನಾ ಯೂನುಸ್ಮೆಟೊವಾ ಎದುರು ಜಯ ಗಳಿಸಿದರು. ಮನು ಮತ್ತು ರಾಣಾ ಫೈನಲ್ನಲ್ಲಿ 17–3ರಿಂದ ಉಜ್ಬೆಕಿಸ್ತಾನದ ನಿಗಿನಾ ಸೈದ್ಕುಲೊವಾ– ಮುಖಮ್ಮದ್ ಕಮಲೊವ್ ಎದುರು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.