ಪ್ಯೊಂಗ್ಚಾಂಗ್, ದಕ್ಷಿಣ ಕೊರಿಯಾ: ಭಾರತ ಪುರುಷರ ಟೇಬಲ್ ಟೆನಿಸ್ ತಂಡವು ಇಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಷಿಪ್ನ ಸೆಮಿಫೈನಲ್ ಪಂದ್ಯದಲ್ಲಿ 0–3ರಿಂದ ಚೈನೀಸ್ ತೈಪೆಯ ವಿರುದ್ಧ ಸೋತು, ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ಬುಧವಾರ ನಡೆದ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಭಾರತ ತಂಡದ ಆಟಗಾರರ ಪ್ರದರ್ಶನ ನಿರಾಶಾದಾಯಕವಾಗಿತ್ತು. ಅನುಭವಿ ಶರತ್ ಕಮಲ್ ಮತ್ತು ಜಿ. ಸತ್ಯನ್ ಅವರು ಎದುರಾಳಿಗೆ ಸುಲಭವಾಗಿ ಮಣಿದರೆ, ಹರ್ಮೀತ್ ದೇಸಾಯಿ ಕೊಂಚ ಪ್ರತಿರೋಧ ತೋರಿದರು.

ಶರತ್ ಅವರು 6–11, 6–11, 9–11ರಿಂದ ವಿಶ್ವದ 26ನೇ ರ್ಯಾಂಕ್ನ ಚುವಾಂಗ್ ಚಿಹ್-ಯುವಾನ್ ಅವರಿಗೆ, ಸತ್ಯನ್ ಅವರು 5-11, 6-11, 10-12ರಿಂದ 7ನೇ ಕ್ರಮಾಂಕದ ಲಿನ್ ಯುನ್-ಜು ಅವರಿಗೆ ಶರಣಾದರು. ಮತ್ತೊಂದು ಪಂದ್ಯದಲ್ಲಿ ಹರ್ಮೀತ್ ಅವರು 6–11, 7–11, 11–7, 9–11ರಿಂದ 33ನೇ ಕ್ರಮಾಂಕದ ಕಾವೊ ಚೆಂಗ್ ಜುಯಿ ವಿರುದ್ಧ ಪರಾಭವಗೊಂಡರು.

ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಸೋತ ತಂಡಗಳಿಗೆ ಕಂಚಿನ ಪದಕ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.