ಬೆಂಗಳೂರು: ಮಹಾರಾಷ್ಟ್ರದ ಪ್ರಣಯ್ ಶೆಟ್ಟಿಗಾರ್ ಅವರು ಇಲ್ಲಿ ನಡೆದ ಅಖಿಲ ಭಾರತ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 19 ವರ್ಷದೊಳಗಿನವರ ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಕೊಂಡರು. ಬಾಲಕಿಯರ ಸಿಂಗಲ್ಸ್ ಕಿರೀಟ ಅದೇ ರಾಜ್ಯದ ಆಲಿಶಾ ನಾಯ್ಕ್ ಪಾಲಾಯಿತು.

ಸೋಮವಾರ ನಡೆದ ಬಾಲಕರ ಫೈನಲ್ ಹಣಾಹಣಿಯಲ್ಲಿ ಆರನೇ ಶ್ರೇಯಾಂಕದ ಪ್ರಣಯ್ 21-13, 18-21, 21-18 ರಿಂದ ಚಂಡೀಗಢದ ರೌನಕ್ ಚೌಹಾಣ್ ಅವರನ್ನು ಮಣಿಸಿದರು. ಬಾಲಕಿಯರ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆಲೀಶಾ ಅವರು 21-9, 21-15ರಿಂದ ಐದನೇ ಶ್ರೇಯಾಂಕದ ಮುಸ್ಕಾನ್ ಖಾನ್ ಅವರಿಗೆ ಆಘಾತ ನೀಡಿದರು.

ಬಾಲಕರ ಡಬಲ್ಸ್‌ನಲ್ಲಿ ಸ್ಥಳೀಯ ಆಟಗಾರರಾದ ನಿಕೋಲಸ್ ನಾಥನ್ ರಾಜ್ ಮತ್ತು ತುಷಾರ್ ಸುವೀರ್ 21-19, 21-17ರಿಂದ ಮೂರನೇ ಶ್ರೇಯಾಂಕದ ಭವ್ಯಾ ಛಾಬ್ರಾ ಮತ್ತು ಪರಮ್ ಚೌಧರಿ (ದೆಹಲಿ) ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು.

ಬಾಲಕಿಯರ ಡಬಲ್ಸ್ ಫೈನಲ್‌ನಲ್ಲಿ ನವ್ಯಾ ಕಂಡೇರಿ (ಆಂಧ್ರ) ಮತ್ತು ರೇಷಿಕಾ ಯು. (ತಮಿಳುನಾಡು) ಜೋಡಿಯು 21-16, 22-20 ಅಂತರದಲ್ಲಿ ಅನ್ಯಾ ಬಿಶ್ತ್ ಮತ್ತು ಏಂಜೆಲ್ ಪುಣೆರಾ (ಉತ್ತರಖಂಡ) ವಿರುದ್ಧ ಜಯ ಸಾಧಿಸಿತು.

ಮಿಕ್ಸೆಡ್ ಡಬಲ್ಸ್‌ನಲ್ಲಿ ಭಾರ್ಗವ್ ರಾಮ್ (ಆಂಧ್ರ) ಮತ್ತು ವೆನ್ನಲಾ ಕೆ. (ತೆಲಂಗಾಣ) ಜೋಡಿಯು 21-19, 21-13 ರಿಂದ ಭವ್ಯಾ ಛಾಬ್ರಾ (ದೆಹಲಿ) ಮತ್ತು ಪ್ರಜ್ಞಾ ಕತಾರಾ (ರಾಜಸ್ಥಾನ) ವಿರುದ್ಧ ಗೆದ್ದು ಚಾಂಪಿಯನ್ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.