ಬೆಂಗಳೂರು: ಯಂಗ್ ಓರಿಯನ್ಸ್ ತಂಡ ರಾಜ್ಯ ಸಬ್ ಜೂನಿಯರ್ (13 ವರ್ಷದೊಳಗಿನವರು) ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಾಲಕರ ವಿಭಾಗದ ಪಂದ್ಯದಲ್ಲಿ ಯಂಗ್ ಓರಿಯನ್ಸ್ 26–22 ಪಾಯಿಂಟ್ಸ್‌ನಿಂದ ಪಟ್ಟಾಭಿರಾಮ ತಂಡವನ್ನು ಮಣಿಸಿತು.

ಇನ್ನೊಂದು ಪಂದ್ಯದಲ್ಲಿ ಯಂಗ್ ಬುಲ್ಸ್ 39–26ಯಿಂದ ಎಂ.ಸಿ.ಎಚ್.ಎಸ್. ತಂಡದ ಎದುರು ಗೆದ್ದಿತು.

ಎಂ.ಎನ್.ಕೆ.ರಾವ್ ಪಾರ್ಕ್ 62–5ರಲ್ಲಿ ಓರಿಯನ್ಸ್ ತಂಡದ ವಿರುದ್ಧ ಜಯಭೇರಿ ಮೊಳಗಿಸಿತು. ಈ ತಂಡವು ವಿರಾಮದ ವೇಳೆಗೆ 43–1 ಮುನ್ನಡೆ ಹೊಂದಿತ್ತು.

ಇತರ ಪಂದ್ಯಗಳಲ್ಲಿ ಧಾರವಾಡದ ಮಲ್ಲಸಜ್ಜನ ತಂಡ 36–30ರಲ್ಲಿ ಬಳ್ಳಾರಿಯ ವೈಸಿಬಿಸಿ ಎದುರೂ, ಕೋರಮಂಗಲ ಎಸ್.ಸಿ. 34–9ರಲ್ಲಿ ಭಾರತ್ ಎಸ್.ಯು. ಮೇಲೂ, ವಿ.ಎನ್.ಸ್ಪೋರ್ಟ್ಸ್ ಕ್ಲಬ್ 39–9ರಲ್ಲಿ ಮೌಂಟ್ಸ್ ಕ್ಲಬ್ ವಿರುದ್ಧವೂ ಗೆಲುವಿನ ತೋರಣ ಕಟ್ಟಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.