ಬೆಂಗಳೂರು: ಕರ್ನಾಟಕ ತಂಡದವರು ಮುಲ್ಕಿ ಸುಂದರ ರಾಮ್ ಶೆಟ್ಟಿ ಅಖಿಲ ಭಾರತ ಆಹ್ವಾನಿತ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ನಿರಾಸೆ ಕಂಡಿದ್ದಾರೆ.

ಮಲ್ಲೇಶ್ವರದ ಬೀಗಲ್ಸ್ ಬ್ಯಾಸ್ಕೆಟ್‌ಬಾಲ್ ಅರೇನಾದಲ್ಲಿ ಗುರುವಾರ ನಡೆದ ‘ಬಿ’ ಗುಂಪಿನ ಹಣಾಹಣಿಯಲ್ಲಿ ಗುಜರಾತ್‌ನ ಇನ್‌ಕಮ್ ಟ್ಯಾಕ್ಸ್ ತಂಡ 82–62 ಪಾಯಿಂಟ್ಸ್‌ನಿಂದ ಆತಿಥೇಯರನ್ನು ಮಣಿಸಿತು.

ಕರ್ನಾಟಕ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೊದಲ ಕ್ವಾರ್ಟರ್‌ನಲ್ಲಿ ಇನ್‌ಕಮ್ ಟ್ಯಾಕ್ಸ್ 29–13ರಿಂದ ಮುಂದಿತ್ತು. ಎರಡನೇ ಕ್ವಾರ್ಟರ್‌ನಲ್ಲಿ ಮಿಂಚಿದ ರಾಜ್ಯ ತಂಡ ಹಿನ್ನಡೆಯನ್ನು 28–43ಕ್ಕೆ ತಗ್ಗಿಸಿಕೊಂಡಿತು. ನಂತರದ ಎರಡು ಕ್ವಾರ್ಟರ್‌ಗಳಲ್ಲಿ ಪ್ರಾಬಲ್ಯ ಮೆರೆದ ಇನ್‌ಕಮ್ ಟ್ಯಾಕ್ಸ್ ತಂಡ ಗೆಲುವಿನ ತೋರಣ ಕಟ್ಟಿತು. ದಿಶಾಂತ್ ಶಾ ಮತ್ತು ವಿನಯ್ ಕೌಶಿಕ್ ತಲಾ 16 ಪಾಯಿಂಟ್ಸ್ ಕಲೆಹಾಕಿದರು.

ರಾಜ್ಯ ತಂಡದ ಮನೋಜ್ (10), ನಿಖಿಲ್ (12) ಮತ್ತು ಗೌತಮ್ (10) ಸೋಲಿನ ನಡುವೆಯೂ ಗಮನ ಸೆಳೆದರು.

‘ಎ’ ಗುಂಪಿನ ಪಂದ್ಯದಲ್ಲಿ ಚೆನ್ನೈಯ ಐಸಿಎಫ್ 71–68 ಪಾಯಿಂಟ್ಸ್‌ನಿಂದ ಡಿಎಲ್‌ಡಬ್ಲ್ಯು ಎದುರು ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.