ಬೆಂಗಳೂರು: ಸತ್ಯಜಿತ್ ಮತ್ತು ಅಕ್ಷಯ್ ಅವರ ಅಮೋಘ ಆಟದ ನೆರವಿನಿಂದ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜು ತಂಡದವರು ಮಲ್ಲೇಶ್ವರಂ ಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಸೋಮವಾರ ಜಯ ಸಾಧಿಸಿತು.

ಬೀಗಲ್ಸ್ ಒಳಾಂಗಣ ಕ್ರೀಡಾಂಗಣ ದಲ್ಲಿ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಈ ತಂಡ ಮಂಗಳೂರಿನ ನಿಟ್ಟೆ ಕಾಲೇಜನ್ನು 77–67ರಿಂದ ಮಣಿಸಿತು. ಸತ್ಯಜಿತ್ 27 ಮತ್ತು ಅಕ್ಷಯ್ 24 ಪಾಯಿಂಟ್ ಕಲೆ ಹಾಕಿ ಎಸ್‌ಜೆಸಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಹುಲ್ ಮತ್ತು ಸೈಯದ್ ಕ್ರಮವಾಗಿ 18 ಮತ್ತು 16 ಪಾಯಿಂಟ್ ಗಳಿಸಿ ನಿಟ್ಟೆ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಮತ್ತೊಂದು ಪಂದ್ಯದಲ್ಲಿ ಆರ್‌ವಿಸಿಇ ತಂಡ 60–47ರಿಂದ ನ್ಯೂ ಹೊರೈಜನ್ ಮ್ಯಾನೇಜ್‌ಮೆಂಟ್ ತಂಡವನ್ನು ಮಣಿಸಿತು. ಆರ್‌ವಿಸಿಇ ಪರ ನಕುಲ್ 16 ಪಾಯಿಂಟ್ ಗಳಿಸಿದರು. ಬಿಎಂಎಸ್‌ಸಿಇ 54–40ರಿಂದ ಸಾಯಿ ವಿದ್ಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ವಿರುದ್ಧ ಗೆದ್ದಿತು. ನ್ಯೂ ಹೊರೈಜನ್ ಕಾಲೇಜು ವಿರುದ್ಧ ಕ್ರೈಸ್ಟ್ ವಿವಿ 48–31ರಿಂದ ಗೆದ್ದಿತು.

ಜೈನ್ ವಿವಿಗೆ ಜಯ: ಬಾಲಕಿಯರ ವಿಭಾಗದಲ್ಲಿ ಜೈನ್ ವಿವಿ ತಂಡ ಸೃಷ್ಟಿ ಕಾಲೇಜು ಎದುರು 54–20ರಿಂದ ಗೆದ್ದಿತು. ಜೈನ್ ವಿವಿ ಪರ ಮೀನು 13 ಪಾಯಿಂಟ್ ಕಲೆ ಕಬಳಿಸಿದರು. ಮೌಂಟ್ ಕಾರ್ಮೆಲ್ ಕಾಲೇಜು ಕ್ರಿಸ್ತು ಜಯಂತಿ ಕಾಲೇಜು ವಿರುದ್ಧ 44–11ರಿಂದ ಗೆಲುವು ಸಾಧಿಸಿತು. ಕಾರ್ಮೆಲ್ ತಂಡಕ್ಕೆ ಹರ್ಷಿತಾ ರಾಜು 14 ಪಾಯಿಂಟ್ ಗಳಿಸಿಕೊಟ್ಟರು. ಕ್ರೈಸ್ಟ್ ವಿವಿ 29–8ರಿಂದ ಎಂಎಸ್‌ಆರ್‌ಐಟಿ ವಿರುದ್ಧ ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.