ಅಹಮದಾಬಾದ್: ಉತ್ತರಾರ್ಧದಲ್ಲಿ ಅಮೋಘ ಆಟವಾಡಿದ ಬೆಂಗಾಲ್ ವಾರಿಯರ್ಸ್ ತಂಡ 39–34 (ವಿರಾಮದ ವೇಳೆ 17–17) ಪಾಯಿಂಟ್ಗಳಿಂದ ದಬಂಗ್ ಡೆಲ್ಲಿ ತಂಡವನ್ನು ಸೋಲಿಸಿ ಪ್ರೊ ಕಬಡ್ಡಿ ಲೀಗ್ನಲ್ಲಿ ಮೊದಲ ಬಾರಿ ಚಾಂಪಿಯನ್ ಆಯಿತು. ಟ್ರೋಫಿ ಜೊತೆ ಮೂರು ಕೋಟಿ ಬಹುಮಾನ ಪಡೆಯಿತು.

ಶನಿವಾರ ನಡೆದ ಫೈನಲ್ನಲ್ಲಿ ವಿಜೇತ ತಂಡದ ಪರ ಇಸ್ಮಾಯಿಲ್ ನಬಿ ಬಕ್ಷ್ 10 ಪಾಯಿಂಟ್ ಗಳಿಸಿ ಮಿಂಚಿದರು. ಸುಕೇಶ್ ಹೆಗ್ಡೆ (8) ಮತ್ತು ರವೀಂದ್ರ ಕುಮಾವತ್ (6) ಅವರಿಗೆ ಉಪಯುಕ್ತ ಬೆಂಬಲ ನೀಡಿದರು. ಜೀವಕುಮಾರ್ ಟ್ಯಾಕ್ಲಿಂಗ್ನಲ್ಲಿ ಮಿಂಚಿ ನಾಲ್ಕು ಪಾಯಿಂಟ್ ಕಲೆಹಾಕಿದರು.

ದಬಂಗ್ ಪರ ಸ್ಟಾರ್ ರೈಡರ್ ನವೀನ್ ಕುಮಾರ್ 11 ಟಚ್ ಪಾಯಿಂಟ್ ಸೇರಿ 18 ಪಾಯಿಂಟ್ ಗಳಿಸಿದರು. ಆದರೆ ಅವರಿಗೆ ಉಳಿದವರಿಂದ ಬೆಂಬಲ ಸಿಗಲಿಲ್ಲ.

ವಿರಾಮದ ನಂತರ ದೆಹಲಿ ಆರು ಮತ್ತು 12ನೇ ನಿಮಿಷ ಎರಡು ಬಾರಿ ಆಲೌಟ್ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.