ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ಗಳಲ್ಲಿ 15 ಪ್ರಶಸ್ತಿಗಳು…ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ಗಳಲ್ಲಿ ಐದು ಪ್ರಶಸ್ತಿಗಳು, ವೃತ್ತಿಪರ ಬಿಲಿಯರ್ಡ್ಸ್ ಟೂರ್ನಿಗಳಲ್ಲಿ ನಾಲ್ಕು ಬಾರಿ ಚಾಂಪಿಯನ್…ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಹತ್ತಾರು ಬಾರಿ ಅಗ್ರ ಪಟ್ಟ, ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬಾರಿ ಚಿನ್ನದ ಪದಕ…ಬಿಲಿಯರ್ಡ್ಸ್ ಮತ್ತು ಸ್ನೂಕರ್‌ಗಳೆರಡರಲ್ಲೂ ಗ್ರ್ಯಾನ್‌ಸ್ಲಾಂ ಆದ ಆಟಗಾರ. ಸಿಕ್ಸ್ ರೆಡ್ಸ್ ಮತ್ತು ಫಿಫ್ಟೀನ್ ರೆಡ್ಸ್‌ಗಳೆರಡರಲ್ಲೂ ಏಷ್ಯನ್ ಮತ್ತು ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಏಕೈಕ ಆಟಗಾರ, 23 ಬಾರಿ ರಾಷ್ಟ್ರೀಯ ಚಾಂಪಿಯನ್…

ವಿಶ್ವಶ್ರೇಷ್ಠ ‘ಕ್ಯೂ’ ಪಟು, ಬೆಂಗಳೂರಿನ ಪಂಕಜ್ ಅಡ್ವಾಣಿ ಅವರ ಕ್ರೀಡಾ ಬದುಕಿನ ಸಾಧನೆಗಳ ಪಟ್ಟಿಯಲ್ಲಿ ಇವೆಲ್ಲ ಪ್ರಮುಖ. ಇಂಥ ಆಟಗಾರ ಇದೀಗ ಹಸೆಮಣೆ ಏರಿದ್ದಾರೆ. ಹಾಗಾದರೆ ಅವರ ಮನ ಗೆದ್ದ ಆ ಚೆಲುವೆ ಯಾರು…?

ಟ್ವೀಟ್ ಮೂಲಕ ಸ್ವತಃ ವಿಷಯ ಬಹಿರಂಗ ಮಾಡುವ ವರೆಗೆ ಪಂಕಜ್ ಅಡ್ವಾನಿ ಮದುವೆ ಬಗ್ಗೆ ಹೊರಜಗತ್ತಿಗೆ ತಿಳಿದೇ ಇರಲಿಲ್ಲ. ಮಂಗಳವಾರ ಮದುವೆಯಾದ ಅವರು ಬುಧವಾರ ಬಾಳಸಂಗಾತಿಯನ್ನು ಮುತ್ತಿನಂಥ ಮಾತುಗಳಿಂದ ವರ್ಣಿಸಿದ್ದಾರೆ; ಸಿಹಿ ಮುತ್ತು ನೀಡುವ ಚಿತ್ರ ಪೋಸ್ಟ್ ಮಾಡಿ ಮನದನ್ನೆಯ ಕೆನ್ನೆ ಕೆಂಪಾಗಿಸಿದ್ದಾರೆ.

‘ಖೇಲ್ ರತ್ನ’, ‘ಅರ್ಜುನ’, ‘ಪದ್ಮಭೂಷಣ’ ಪಂಕಜ್ ಬಾಳಿಗೆ ಭೂಷಣವಾದ ಆ ಯುವತಿ, ಮುಂಬೈನ ಸಾನಿಯಾ ಷಡದ್ಪುರಿ. ಬಾಲಿವುಡ್ ಬೆಡಗಿಯರ ಅಂದ ಹೆಚ್ಚಿಸುವ ಪ್ರಸಾದನ ಕಲಾವಿದೆ. ಕೂದಲಿಗೆ ಮೋಹಕ ಸ್ಪರ್ಶ ನೀಡುವುದರಲ್ಲಿ ಅವರದು ಎತ್ತಿದ ಕೈ. 15ನೇ ವಯಸ್ಸಿನಲ್ಲೇ ಫ್ಯಾಷನ್ ಡಿಸೈನ್ ವೃತ್ತಿಯ ಬಗ್ಗೆ ಆಸಕ್ತಿ ಹೊಂದಿರುವ ಅವರು ಲಾಸ್ ಏಂಜಲೀಸ್ ಮೇಕಪ್ ಡಿಸೈನರಿ ಸಂಸ್ಥೆಯಿಂದ ಪದವಿ ಪಡೆದಿದ್ದರು. ಲಂಡನ್‌ನ ಡಿಲಾಮರ್ ಇನ್‌ಸ್ಟಿಟ್ಯೂಟ್‌ನಲ್ಲಿ ಹೆಚ್ಚುವರಿ ಕೋರ್ಸ್ ಮಾಡಿದ್ದರು. ಇಂಟರ್ನ್‌ಷಿಪ್ ಮತ್ತು ಬಿ–ಬ್ಲಂಟ್‌ನಲ್ಲಿ ಕೆಲ ಕಾಲ ಕೆಲಸ ಮಾಡಿದ ನಂರ ಬಾಲಿವುಡ್‌ಗೆ ಅವರ ಪ್ರವೇಶವಾಯಿತು.

‘ಶುದ್ಧ್ ದೇಸಿ ರೊಮ್ಯಾನ್ಸ್’, ‘ದಾವತ್ ಎ–ಇಶ್ಕ್’, ‘ರಸ್ತೊಮ್’, ‘ಪ್ಯಾರ್ ಕಾ ಪಂಚ್‌ನಾಮ’ ‘ವೆಡಿಂಗ್ ಪುಲಾವ್’ ಮತ್ತು ‘ಕಮಾಂಡೊ–2’ ಮುಂತಾದವು ಅವರು ಪ್ರಸಾದನ ಮಾಡಿದ ಪ್ರಮುಖ ಚಿತ್ರಗಳು. ಕೆಲವು ನಟ–ನಟಿಯರಿಗೆ ವೈಯಕ್ತಿಕ ಪ್ರಸಾದನ ಮಾಡುವ ಕಾರ್ಯದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಒಂದು ದಶಕದಿಂದ ಸ್ವಂತ ಉದ್ಯಮ ನಡೆಸುತ್ತಿರುವ ಸಾನಿಯಾ ‘ಸಹಜ ಸೌಂದರ್ಯಕ್ಕೆ ಪ್ರಸಾದನದ ಮೂಲಕ ಗ್ಲಾಮರ್ ಸ್ಪರ್ಶ ನೀಡುವುದಕ್ಕೆ ನಾನು ಹೆಚ್ಚು ಆದ್ಯತೆ ಕೊಡುತ್ತೇನೆ. ಸುಂದರವಾಗಿ ಕಾಣುವ ಮೂಲಕ ಗ್ರಾಹಕರು ಖುಷಿ ಹೊಂದಬೇಕು, ಅವರ ಭರವಸೆ ಹೆಚ್ಚಬೇಕು ಎಂಬುದು ನನ್ನ ಉದ್ದೇಶ’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.