ನವದೆಹಲಿ : ಭಾರತದ ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳು ಸರ್ಬಿಯಾದ ವೋಜ್ವೊಡಿನಾದಲ್ಲಿ ನಡೆಯುತ್ತಿರುವ ಗೋಲ್ಡನ್ ಗ್ಲೌ ಯುವ ಚಾಂಪಿಯನ್‌ಷಿಪ್‌ನಲ್ಲಿ ಪಾರಮ್ಯ ಮುಂದುವರಿಸಿದ್ದಾರೆ. ದೇಶದ ಒಟ್ಟು 13 ಬಾಕ್ಸರ್‌ಗಳು ವಿವಿಧ ವಿಭಾಗಗಳಲ್ಲಿ ಫೈನಲ್ ತಲುಪಿದ್ದಾರೆ. ಇವರ ಪೈಕಿ ಆರು ಮಂದಿ ಮಹಿಳೆಯರು.

ಪುರುಷರ 56 ಕೆ.ಜಿ.ವಿಭಾಗದಲ್ಲಿ ಆಕಾಶ್ ಕುಮಾರ್ ಸ್ಕಾಟ್ಲೆಂಡ್‌ನ ಜಾನ್ ಕೇಸಿ ಅವರನ್ನು 5–0ಯಿಂದ ಮಣಿಸಿ ಅಂತಿಮ ಹಣಾಹಣಿಗೆ ಸಜ್ಜಾದರು. 60 ಕೆ.ಜಿ.ವಿಭಾಗದ ಸೆಮಿಫೈನಲ್‌ನಲ್ಲಿ ಹಂಗೆರಿಯ ಅಲೆಕ್ಸ್ ಜೇಕಬ್ ಅವರ ವಿರುದ್ಧ ಅಂಕಿತ್ ಆರಂಭದಲ್ಲಿ ಹಿನ್ನಡೆ ಕಂಡರೂ ನಂತರ ಲಯ ಕಂಡುಕೊಂಡು ಗೆದ್ದರು. 64 ಕೆ.ಜಿ ವಿಭಾಗದಲ್ಲಿ ಅಕಾಶ್ ಅವರು ಪೋಲೆಂಡ್‌ನ ಡ್ಯಾನಿಯಲ್ ಪೊಟ್ರೊವಸ್ಕಿ ಅವರನ್ನು ಮಣಿಸಿದರು.

ಮಿಡ್ಲ್‌ವೇಟ್ ವಿಭಾಗದಲ್ಲಿ ನಿತಿನ್ 5–0ಯಿಂದ ಫಿಲಿಪ್ ಜಿನಿಕ್ ಎದುರು ಗೆದ್ದರು. ಎಸ್. ಅರುಣ್ ಸಿಂಗ್ ಮತ್ತು ಅಮಾನ್ ಕ್ರಮವಾಗಿ 49 ಕೆ.ಜಿ ಮತ್ತು +91 ಕೆ.ಜಿ ವಿಭಾಗದಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು.

ಮಹಿಳೆಯರ ವಿಭಾಗದ 48 ಕೆ.ಜಿ ವಿಭಾಗದಲ್ಲಿ ನೀತು, ರಷ್ಯಾದ ಜೀನಿಯಾ ಬೆಚಸ್ನೋವ ಎದುರು ಗೆದ್ದರು. 54 ಕೆ.ಜಿ ವಿಭಾಗದಲ್ಲಿ ದಿವ್ಯಾ ಪವಾರ್ ರಷ್ಯಾದ ಮರಿಯಾ ಮೇಡ್ ಅವರನ್ನು ಮಣಿಸಿ ಫೈನಲ್ ತಲುಪಿದರು. ರಷ್ಯಾದ ಡಯಾನಾ ರೈಸ್ ಎದುರು ಗೆದ್ದು ಮನಿಷಾ 64 ಕೆ.ಜಿ ವಿಭಾಗದ ಫೈನಲ್‌ಗೆ ಏರಿದರು. 69 ಕೆ.ಜಿ ವಿಭಾಗದಲ್ಲಿ ಲಲಿತಾ ಅವರು ಪೋಲೆಂಡ್‌ನ ಪ್ಯಾಟಿಕ್‌ಜಾ ಅವರನ್ನು 401ರಿಂದ ಸೋಲಿಸಿದರೆ ನೇಹಾ ಯಾದವ್ 81+ ಕೆ.ಜಿ ವಿಭಾಗದಲ್ಲಿ ನೇರ ಪ್ರವೇಶ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.