ಕೋಲ್ಕತ್ತ:ಮಣಿಕಾ ಬಾತ್ರಾ ಹಾಗೂ ಮಾನವ್ ಠಕ್ಕರ್ ಅವರ ಅಪೂರ್ವ ಆಟದ ನೆರವಿನಿಂದ ಇಲ್ಲಿ ನಡೆಯುತ್ತಿರುವ ಸಿಯೆಟ್ ಅಲ್ಟಿಮೇಟ್ ಟೇಬಲ್ ಟೆನಿಸ್ ಟೂರ್ನಿಯ ಪಂದ್ಯದಲ್ಲಿ ದಬಂಗ್ ಸ್ಮ್ಯಾಷರ್ಸ್ ತಂಡವು ಅಮೋಘ ಜಯ ಸಾಧಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಮಣಿಕಾ ಅವರ ನೇತೃತ್ವದ ದಬಂಗ್ ಸ್ಮ್ಯಾಷರ್ಸ್ ತಂಡವು ಎಂಪವರ್ಜಿ ಚಾಲೆಂಜರ್ಸ್ ತಂಡವನ್ನು 15–6ರಿಂದ ಮಣಿಸಿತು.

ಈ ಮೂಲಕ ಲೀಗ್ ಹಂತದಲ್ಲಿ ಒಟ್ಟು 63 ಪಾಯಿಂಟ್ ಕಲೆಹಾಕಿದ ದಬಂಗ್ ಸ್ಮ್ಯಾಷರ್ಸ್ ತಂಡವು ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

ಮೊದಲ ಪಂದ್ಯದಲ್ಲಿ ಮಣಿಕಾ ಅವರು ಎದುರಾಳಿ ತಂಡದ ಲೀ ಹೊ ಚಿಂಗ್ ಅವರನ್ನು 7–11, 11–9, 11–10ರಿಂದ ಮಣಿಸಿದರು.

ಮಾನವ್ ಠಕ್ಕರ್ ಅವರು ಯೋಶಿದಾ ಮಸಾಕಿ ಅವರನ್ನು 11–10, 5–11,11–9ರಿಂದ ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.