ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics | ಡ್ಯಾನ್ಸರ್‌ಗಳ ಪಟ್ಟಿಗೆ ಮಣಿದ ಆಯೋಜಕರು

ಮುಷ್ಕರ ಬೆದರಿಕೆ ಕೈಬಿಟ್ಟ ಕಲಾವಿದರು
Published 24 ಜುಲೈ 2024, 15:12 IST
Last Updated 24 ಜುಲೈ 2024, 15:12 IST
ಅಕ್ಷರ ಗಾತ್ರ

ಪ್ಯಾರಿಸ್‌: ಶುಕ್ರವಾರ ಒಲಿಂಪಿಕ್‌ ಕ್ರೀಡೆಗಳ ಉದ್ಘಾಟನಾ ಸಮಾರಂಭಕ್ಕೆ ಮುಷ್ಕರದ ಬೆದರಿಕೆಯೊಡ್ಡಿದ ನೂರಾರು ನೃತ್ಯ ಕಲಾವಿದರು ಈಗ ಪ್ರತಿಭಟನೆ ನಿರ್ಧಾರ ಕೈಬಿಟ್ಟಿದ್ದಾರೆ. ಅವರಿಗೆ ಹೆಚ್ಚಿನ ಸಂಭಾವನೆ ನೀಡುವುದಾಗಿ ಆಯೋಜಕರು ಒಪ್ಪಿಕೊಂಡಿದ್ದಾರೆ ಎಂದು ಅವರ ಸಂಘಟನೆ ತಿಳಿಸಿದೆ.

‘ಪ್ಯಾರಿಸ್‌ 2024’ ಸಂಘಟಕರ ಜೊತೆ ಬುಧವಾರ ಅಂತಿಮ ಸುತ್ತಿನ ಮಾತುಕತೆ ನಡೆಯಿತು. ತಮಗೆ ನೀಡುವ ಸಂಭಾವನೆ ಹೆಚ್ಚಿಸಬೇಕೆಂದು ಕಲಾವಿದರು ಪಟ್ಟುಹಿಡಿದಿದ್ದರು ಎಂದು ಎಸ್‌ಎಫ್‌ಎ–ಸಿಜಿಟಿ ಸಂಘಟನೆ ತಿಳಿಸಿದೆ.

ಉದ್ಘಾಟನೆ ವೇಳೆ 3000 ಮಂದಿ ನೃತ್ಯಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಇವರಲ್ಲಿ ಶೇ 10ರಷ್ಟು ಮಂದಿ ಈ ಸಂಘಟನೆಯಲ್ಲಿದ್ದರು. ವೇತನ ತಾರತಮ್ಯ ಪ್ರತಿಭಟಿಸಿ ಮುಷ್ಕರ ನಡೆಸುವುದಾಗಿ ಅರು ಹೋದ ವಾರ ನೋಟಿಸ್‌ ನೀಡಿದ್ದರು.

ಸೀನ್‌ ನದಿಯಲ್ಲಿ ದೋಣಿಗಳ ಮೇಲೆ ನಡೆದ ರಿಹರ್ಸಲ್‌ (ತಾಲೀಮಿನ) ವೇಳೆಯೂ ಪ್ರತಿಭಟನೆ ದಾಖಲಿಸಿದ್ದರು. ಈ ಕಲಾವಿದರು ಒಪ್ಪಂದದಂತೆ ಇದೀಗ ₹12,500 ದಿಂದ ₹21,700 ಪಡೆಯಲಿದ್ದಾರೆ.

ಪೊಲೀಸರು ಮತ್ತು ಮುನ್ಸಿಪಲ್‌ ಕಾರ್ಮಿಕರಿಗೆ ಒಂದು ಬಾರಿಯ ಮೊತ್ತವಾಗಿ ತಲಾ ₹1,73,000 ನೀಡಲು ಒಪ್ಪಿಕೊಳ್ಳಲಾಗಿದೆ.

ಒಲಿಂಪಿಕ್ಸ್‌ ಇತಿಹಾಸದಲ್ಲೇ ಮೊದಲ ಬಾರಿ ಉದ್ಘಾಟನಾ ಸಮಾರಂಭ ಪ್ರಧಾನ ಕ್ರೀಡಾಂಗಣದಿಂದ ಹೊರಗೆ ನಡೆಯುತ್ತಿದೆ. ಪ್ಯಾರಿಸ್‌ನ ಹೃದಯಭಾಗದಲ್ಲಿರುವ ಸೀನ್‌ ನದಿಯಲ್ಲಿ ದೋಣಿಗಳ ಮೇಲೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT