ನವದೆಹಲಿ: ಭಾರತದ ಡೇವಿಸ್ ಕಪ್ ತಂಡವು ಪಾಕಿಸ್ತಾನ ತೆರಳಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ತಂಡದ ಆಟಗಾರ ಪ್ರಜ್ವಲ್ ಅವರಿಗೆ ಪಾಕ್ನ ವೀಸಾ ನಿರಾಕರಿಸಲಾಗಿದೆ. ಉಳಿದ ಆಟಗಾರರಿಗೆ ಗುರುವಾರ ವೀಸಾ ನೀಡಲಾಗಿದೆ.

ಇಸ್ಲಾಮಾಬಾದ್ನಲ್ಲಿ ಫೆ.3 ಮತ್ತು 4ರಂದು ಪಂದ್ಯಗಳು ನಡೆಯಲಿದ್ದು, ಭಾನುವಾರ ಭಾರತ ತಂಡವು ಅಲ್ಲಿಗೆ ತೆರಳಲು ಸಿದ್ಧತೆ ನಡೆಸಿದೆ. ಈ ಮಧ್ಯೆ ಪ್ರಜ್ವಲ್ ಅವರಿಗೆ ವೀಸಾ ನಿರಾಕರಿಸಿರುವುದು ತಂಡವನ್ನು ಚಿಂತೆಗೆ ಎಡೆಮಾಡಿದೆ. ಯಾಕೆಂದರೆ ಪಂದ್ಯದ ವೇಳೆ ಯಾರಾದರೂ ಗಾಯಗೊಂಡರೆ ಆಟಗಾರರ ಕೊರತೆ ಎದುರಾಗಲಿದೆ.

‘ತಂಡದಲ್ಲಿ ಪ್ರಜ್ವಲ್ ಅಗತ್ಯವಿದೆ. ಮತ್ತೊಮ್ಮೆ ನಾವು ಹೈಕಮಿಷನ್ಗೆ ಕಳುಹಿಸುತ್ತಿದ್ದೇವೆ. ಕಾರಣ ವಿಲ್ಲದೆ ವೀಸಾ ನಿರಾಕರಿಸಿದ್ದಾರೆ’ ಎಂದು ತಂಡದ ನಾಯಕ ರೋಹಿತ್ ರಾಜ್ಪಾಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.