ಡಸೆಲ್ಡಾರ್ಫ್: ಭಾರತದ ಜೂನಿಯರ್ ಪುರುಷರ ತಂಡ, ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿ ಪಂದ್ಯದಲ್ಲಿ ಸೋಮವಾರ ಇಂಗ್ಲೆಂಡ್ ತಂಡವನ್ನು 4–0 ಗೋಲುಗಳಿಂದ ಸೋಲಿಸಿತು.

ರಾಜಿಂದರ್ ಸಿಂಗ್ 13ನೇ ನಿಮಿಷ, ಅಮಿರ್ ಅಲಿ 33ನೇ ನಿಮಿಷ, ಅಮನ್ದೀಪ್ ಲಾಕ್ರಾ 41ನೇ ನಿಮಿ ಮತ್ತು ಅರೈಜೀತ್ ಸಿಂಗ್ ಹುಂಡಲ್ 58ನೇ ನಿಮಿಷ ಭಾರತ ತಂಡದ ಪರ ಗೋಲುಗಳನ್ನು ಗಳಿಸಿದರು.

ಕೊಂಚ ನಿಧಾನವಾಗಿ ಹೊಂದಿಕೊಂಡ ಭಾರತ ತಂಡಕ್ಕೆ ರಾಜಿಂದರ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಮುನ್ನಡೆ ಒದಗಿಸಿಕೊಟ್ಟರು. ವಿರಾಮದ ವೇಳೆಗೆ ಈ ಮುನ್ನಡೆಯನ್ನು ರಕ್ಷಿಸಿಕೊಳ್ಳುವಲ್ಲಿ ಭಾರತ ತಂಡ ಯಶಸ್ವಿ ಆಯಿತು. ಉತ್ತರಾರ್ಧದ ಆರಂಭದಲ್ಲಿ ಅಮಿರ್ ಅಲಿ ಕ್ಷಿಪ್ರಗತಿಯಲ್ಲಿ ಗೋಲು ಗಳಿಸಿ ಭಾರತದ ಮುನ್ನಡೆ ಹೆಚ್ಚಿಸಿದರು. ನಂತರ ಇಂಗ್ಲೆಂಡ್ ಒತ್ತಡಕ್ಕೆ ಸಿಲುಕಿತು. ಅಮನ್ದೀಪ್, ಪೆನಾಲ್ಟಿ ಕಾರ್ನರ್ ಪರಿವರ್ತಿಸಿ ಭಾರತದ ಮುನ್ನಡೆಯನ್ನು ಹೆಚ್ಚಿಸಿದರು. 15 ನಿಮಿಷಗಳು ಉಳಿದಿರುವಾಗ ಇಂಗ್ಲೆಂಡ್ ಸಾಕಷ್ಟು ಒತ್ತಡ ಹೇರಿತಾದರೂ, ಭಾರತದ ರಕ್ಷಣಾಕೋಟೆ ಭೇದಿಸಲು ಆಗಲಿಲ್ಲ. ಪಂದ್ಯ ಇನ್ನೇನು ಮುಗಿಯಲಿದೆ ಎನ್ನುವಾಗ ಅರೈಜೀತ್ ಮುನ್ನಡೆಯನ್ನು (4–0) ಮತ್ತಷ್ಟು ಉಬ್ಬಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.