ಪ್ಯಾರಿಸ್: ಭಾರತದ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್, ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಗೆದ್ದರು. ಬುಧವಾರದ ಪಂದ್ಯಗಳಲ್ಲಿ ಎದುರಾಳಿಗಳನ್ನು ಇವರಿಬ್ಬರೂ ನೇರ ಗೇಮ್‌ಗಳಿಂದ ಮಣಿಸಿದರು. ಆದರೆ ಸಮೀರ್ ವರ್ಮಾ ಸೋತು ಹೊರಬಿದ್ದರು.

ಜಪಾನ್‌ನ ಸಯೇನಾ ಕವಕಮಿ ವಿರುದ್ಧ ಸೈನಾ 21–11, 21–11ರಿಂದ ಗೆದ್ದರು. ಶ್ರೀಕಾಂತ್ ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್ ಅವರನ್ನು 21–19, 21–13ರಿಂದ ಸೋಲಿಸಿದರು.

ಕಳೆದ ವಾರ ನಡೆದಿದ್ದ ಡೆನ್ಮಾರ್ಕ್ ಓಪನ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಸಮೀರ್ ವರ್ಮಾ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿಗೆ 21–16, 17–21, 15–21ರಿಂದ ಮಣಿಸಿದರು.

ಮನು–ಸುಮಿತ್‌ಗೆ ಜಯ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಜೋಡಿ ಮನು ಅತ್ರಿ ಮತ್ತು ಬಿ.ಸುಮಿತ್ ರೆಡ್ಡಿ ಕೊರಿಯಾದ ಮಿನ್ ಹ್ಯುಕ್ ಕಾಂಗ್ ಮತ್ತು ಕಿಮ್ ವೋನ್ ಹೊ ಜೋಡಿಯನ್ನು 21–18, 21–17ರಿಂದ ಮಣಿಸಿ ಎರಡನೇ ಸುತ್ತು ಪ್ರವೇಶಿಸಿತು.

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಇಂಗ್ಲೆಂಡ್‌ನ ‘ದಂಪತಿ’ ಕ್ರಿಸ್ ಅಡ್‌ಕೊಕ್ ಮತ್ತು ಗ್ಯಾಬ್ರಿಯೆಲ್ ಅಡ್‌ಕೊಕ್ ಜೋಡಿಗೆ 22–24, 21–18, 19–21ರಿಂದ ಮಣಿಯಿತು. ಭಾರತದ ಮತ್ತೊಂದು ಮಿಶ್ರ ಡಬಲ್ಸ್ ಜೋಡಿ ರೋಹನ್ ಕಪೂರ್ ಮತ್ತು ಕುಹೂ ಗರ್ಗ್ 21–5, 21–10ರಿಂದ ಜೆಂಗ್ ಸಿವೀ ಮತ್ತು ಹಾಂಗ್ ಯಾಗ್ಯಂಗ್ ಮುಂದೆ ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.