ಪ್ಯಾರಿಸ್: ಭಾರತದ ಪಿ.ವಿ.ಸಿಂಧು ಅವರು ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಕ್ರವಾರ ಸೋಲನುಭವಿಸಿದರೂ, ಚೀನಾ ಎದುರಾಳಿ ಚೆನ್ ಯು ಫೀ ಅವರಿಗೆ ತೀವ್ರ ಪೈಪೋಟಿ ನೀಡಿದರು. ಮೂರು ಗೇಮ್‌ಗಳಲ್ಲಿ ಗೆದ್ದ ಚೀನಾ ಆಟಗಾರ್ತಿ ಸೆಮಿಫೈನಲ್ ತಲುಪಿದರು.

ಗಾಯಾಳಾಗಿ ಸುಮಾರು ನಾಲ್ಕು ತಿಂಗಳು ಆಟದಿಂದ ದೂರವಿದ್ದ ಸಿಂಧು ಪುನರಾಗಮನದ ಹಾದಿಯಲ್ಲಿ ತಮ್ಮ ಸಾಮರ್ಥ್ಯ ಕುಂದಿಲ್ಲ ಎಂಬುದನ್ನು ಸಾಬೀತುಪಡಿಸಿದರು. ಚೆನ್ ಅಂತಿಮವಾಗಿ ಒಂದು ಗಂಟೆ 32 ನಿಮಿಷಗಳ ಕಾಲ ನಡೆದ ಪಂದ್ಯವನ್ನು 22–24, 21–17, 18–21ರಲ್ಲಿ ಗೆದ್ದುಕೊಂಡರು.

2019ರಲ್ಲಿ ವಿಶ್ವ ಚಾಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವಾಗ ಸಿಂಧು, ಇದೇ ಎದುರಾಳಿಯನ್ನು ಸೋಲಿಸಿದ್ದರು. ಆದಾದ ನಂತರ ಎರಡು ಮುಖಾಮುಖಿಗಳಲ್ಲಿ ಚೀನಾ ಆಟಗಾರ್ತಿ ಗೆಲುವು ಕಂಡಿದ್ದಾರೆ.

ದೀರ್ಘಕಾಲದ ನಂತರ ವಿಶ್ವ ದರ್ಜೆಯ ಆಟಗಾರ್ತಿಯನ್ನು ಎದುರಿಸಿದ ಸಿಂಧು, ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಯಾದ ಕುರುಹೂ ನೀಡಲಿಲ್ಲ. ಆಕ್ರಮಣಕಾರಿ ಹೊಡೆತಗಲ ಜೊತೆಗೆ ಅಂಕಣದಲ್ಲೂ ಅವರ ಚುರುಕುತನ ಪ್ರದರ್ಶಿಸಿದರು. ಇಬ್ಬರು ಆಟಗಾರ್ತಿಯರ ನಡುವೆ ಆಟದ ಮಟ್ಟದಲ್ಲಿ ಹೆಚ್ಚಿನ ವ್ಯತ್ಯಾಸ ಇರಲಿಲ್ಲ. ಆಕರ್ಷಕ ಡ್ರಾಪ್, ಕ್ರಾಸ್‌ಕೋರ್ಟ್ ಹೊಡೆತಗಳು ಕಾಣಸಿಕ್ಕಿದವು. ಆದರೆ ನಿರ್ಣಾಯಕ ಕ್ಷಣಗಳಲ್ಲಿ ಚೆನ್ ಯು ಫಿ ಮೇಲುಗೈ ಸಾಧಿಸಿದರು.

ಸಾತ್ವಿಕ್–ಚಿರಾಗ್ ಮುನ್ನಡೆ:

ಅಗ್ರಮಾನ್ಯ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ 21–13, 21–12ರಲ್ಲಿ ಮಲೇಷ್ಯಾದ ಮನ್ ವೀ ಚೊಂಗ್ ಮತ್ತು ಕೈ ವೂ ಟೀ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.