ನವದೆಹಲಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಉತ್ತಮ ಸಾಮರ್ಥ್ಯ ತೋರಿದ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಗೋಲ್ ಕೀಪರ್ ಸವಿತಾ ಪುನಿಯಾ ಮತ್ತು ಪ್ಯಾರಾಲಿಂಪಿಕ್ ಪದಕ ವಿಜೇತರಾದ ಮಾರಿಯಪ್ಪನ್ ತಂಗವೇಲು ಮತ್ತು ಶರದ್ ಕುಮಾರ್ ಅವರಿಗೆ ಮಂಗಳವಾರ ಭಾರತೀಯ ಕ್ರೀಡಾ ಪ್ರಾಧಿಕಾರವು (ಸಾಯ್) ಉದ್ಯೋಗದಲ್ಲಿ ಬಡ್ತಿ ನೀಡಿದೆ.

ಟೋಕಿಯೊದಲ್ಲಿ ಕಂಚು ಗೆದ್ದ ಪುರುಷರ ಹಾಕಿ ತಂಡದ ಸಹಾಯಕ ಸಿಬ್ಬಂದಿಯಾಗಿದ್ದ ತರಬೇತುದಾರ ಪಿಯೂಷ್ ದುಬೆ ಅವರಿಗೂ ಬಡ್ತಿ ನೀಡಲು ಉದ್ದೇಶಿಸಲಾಗಿದೆ. ಸಾಯ್ನ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಅರ್ಜುನ ಪ್ರಶಸ್ತಿ ಪುರಸ್ಕೃತ ಬಾಕ್ಸರ್ ದಿವಂಗತ ಡಿಂಕೊ ಸಿಂಗ್ ಅವರ ಕುಟುಂಬಕ್ಕೆ ₹ 6.87 ಲಕ್ಷ ಅನುದಾನ ನೀಡಲು ಸಾಯ್ ನಿರ್ಧರಿಸಿದೆ. 42 ವರ್ಷದ ಡಿಂಕೊ, ಜೂನ್ನಲ್ಲಿ ಲಿವರ್ ಕ್ಯಾನ್ಸರ್ನಿಂದ ನಿಧನರಾಗಿದ್ದರು.

ಸವಿತಾ ಅವರು ಸಹಾಯಕ ತರಬೇತುದಾರರಿಂದ ತರಬೇತುದಾರರಾಗಿ ಬಡ್ತಿ ಪಡೆದರೆ, ರಾಣಿ ಮತ್ತು ದುಬೆ ಅವರನ್ನು ಸೀನಿಯರ್ ಕೋಚ್ಗಳನ್ನಾಗಿ ಬಡ್ತಿ ನೀಡಲಾಗಿದೆ. ರಾಣಿ ಮತ್ತು ಸವಿತಾ ಒಲಿಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತ ತಂಡದಲ್ಲಿದ್ದರು.

ಟೋಕಿಯೊದಲ್ಲಿ ಸತತ ಎರಡನೇ ಪ್ಯಾರಾಲಿಂಪಿಕ್ ಪದಕ ಗೆದ್ದ ಹೈಜಂಪ್ ಪಟು ಮಾರಿಯಪ್ಪನ್, ಹಿರಿಯ ತರಬೇತುದಾರರಿಂದ ಮುಖ್ಯ ತರಬೇತುದಾರರಾಗಿ ಮತ್ತು ಸಹಾಯಕ ತರಬೇತುದಾರರಾಗಿದ್ದ ಶರದ್ ಅವರನ್ನು (ಟೋಕಿಯೊದಲ್ಲಿ ಕಂಚು ತರಬೇತುದಾರರನ್ನಾಗಿ ಬಡ್ತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.