ಹಾಂಗ್ಕಾಂಗ್: ಟ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಹಾಂಗ್ಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಡಬಲ್ಸ್ನ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಹೊರಬಿದ್ದರು.

ಕಾಮನ್ವೆಲ್ತ್ ಕ್ರೀಡಾಕೂಟದ ಕಂಚು ವಿಜೇತ ಭಾರತದ ಜೋಡಿಯು ಮಂಗಳವಾರ 11–21, 20–22ರಿಂದ ಚೀನಾದ ಲಿಯು ಶೆಂಗ್ ಮತ್ತು ಟಾನ್ ನಿಂಗ್ ಅವರಿಗೆ ಶರಣಾಯಿತು.

ವಿಶ್ವ ಕ್ರಮಾಂಕದಲ್ಲಿ 26ನೇ ಸ್ಥಾನದಲ್ಲಿರುವ ಟ್ರಿಸಾ– ಗಾಯತ್ರಿ ಜೋಡಿಗೆ ಮೂರನೇ ರ್ಯಾಂಕ್ನ ಚೀನಿ ಆಟಗಾರ್ತಿಯರ ವಿರುದ್ಧ ಸತತ ಎರಡನೇ ಸೋಲು ಇದಾಗಿದೆ. ಒಟ್ಟು ಮೂರು ಮುಖಾಮುಖಿಯಲ್ಲಿ ಮೊದಲ ಪಂದ್ಯವನ್ನು ಭಾರತದ ಆಟಗಾರ್ತಿಯರು ಗೆದ್ದಿದ್ದರು.

ಟ್ರಿಸಾ– ಗಾಯತ್ರಿ ಜೋಡಿ ಆರಂಭಿಕ ಸುತ್ತಿನ ಪಂದ್ಯದಲ್ಲಿ 21–14, 21–13 ರಿಂದ ಉಕ್ರೇನ್ನ ಪೊಲಿನಾ
ಬುಹ್ರೊವಾ– ಯೆವೆನಿಯಾ ಕಂಟೆಮಿರ್ ಜೋಡಿಯನ್ನು ಹಿಮ್ಮೆಟ್ಟಿಸಿತ್ತು.

ಸುಮೀತ್ ರೆಡ್ಡಿ ಮತ್ತು ಸಿಕ್ಕಿ ರೆಡ್ಡಿ ಮಾತ್ರ ಕಣದಲ್ಲಿ ಉಳಿದಿರುವ ಭಾರತದ ಆಟಗಾರರಾಗಿದ್ದಾರೆ. ಅವರು ಮಿಶ್ರ ಡಬಲ್ಸ್ನ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಎಂಟನೇ ಶ್ರೇಯಾಂಕದ ಗೋಹ್ ಸೂನ್ ಹುವಾಟ್ ಮತ್ತು ಲೈ ಶೆವೊನ್ ಜೆಮಿ (ಮಲೇಷ್ಯಾ) ಅವರನ್ನು ಎದುರಿಸದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.