ಭುವನೇಶ್ವರ: ಜಪಾನ್ ಎದುರು ಭರ್ಜರಿ ಜಯ ಸಾಧಿಸಿದ ಭಾರತ ತಂಡ ಎಫ್ಐಎಚ್ ಸಿರೀಸ್ ಹಾಕಿ ಫೈನಲ್ಸ್ನ ಪ್ರಶಸ್ತಿ ಸುತ್ತು ಪ್ರವೇಶಿಸಿತು. ಕಳಿಂಗ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತ 7–2ರಿಂದ ಗೆದ್ದಿತು. ಶನಿವಾರ ನಡೆಯಲಿರುವ ಫೈನಲ್ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣಸಲಿವೆ.

ಎರಡನೇ ನಿಮಿಷದಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟ ಭಾರತ ನಂತರ ಪಂದ್ಯದ ಮೇಲೆ ಆಧಿಪತ್ಯ ಸ್ಥಾಪಿಸಿತು. ಕಿಟಜೆಟಾ ಕೆನ್ಜಿ ಪಂದ್ಯದ ಮೊದಲ ಗೋಲು ಗಳಿಸಿದರು. 100ನೇ ಅಂತರರಾಷ್ಟ್ರೀಯ ಪಂದ್ಯ ಆಡಿದ ಹರ್ಮನ್ ಪ್ರೀತ್ ಸಿಂಗ್ ಏಳನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿಸಿ ಭಾರತದ ಖಾತೆ ತೆರೆದರು. 14ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ವರುಣ್ ಕುಮಾರ್ ಗೋಲಾಗಿ ಪರಿವರ್ತಿಸಿದರು. 20ನೇ ನಿಮಿಷದಲ್ಲಿ ವಟನಬೆ ಕೋಟ ಜಪಾನ್ಗೆ ಸಮಬಲ ಗಳಿಸಿಕೊಟ್ಟರು.

ನಂತರ ಭಾರತದ ಆಟಗಾರರು ಸತತ ಗೋಲುಗಳ ಮೂಲಕ ಪ್ರವಾಸಿ ತಂಡವನ್ನು ಕಂಗೆಡಿಸಿದರು. ರಮಣ್ ದೀಪ್ ಸಿಂಗ್ (23, 37ನೇ ನಿಮಿಷ), ಹಾರ್ದಿಕ್ ಸಿಂಗ್ (25ನೇ ನಿ), ಗುರ್ಸಾಹೀಬ್ಜೀತ್ ಸಿಂಗ್ (43ನೇ ನಿ) ಮತ್ತು ವಿವೇಕ್ ಪ್ರಸಾದ್ (47ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ಉಭಯ ತಂಡಗಳು ಈ ಹಿಂದೆ ಒಟ್ಟು 15 ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ ಭಾರತ ಪಾರಮ್ಯ ಮೆರೆದಿದ್ದು 13 ಪಂದ್ಯಗಳನ್ನು ಗೆದ್ದಿದೆ. ಒಂದರಲ್ಲಿ ಜಪಾನ್ ಗೆದ್ದಿದ್ದರೆ, ಒಂದು ಪಂದ್ಯ ಡ್ರಾ ಆಗಿತ್ತು. ಗೋಲು ಗಳಿಕೆಯಲ್ಲೂ ಭಾರತ ಅಮೋಘ ಸಾಧನೆ ಮಾಡಿದೆ. ಒಟ್ಟು 63 ಗೋಲು ಗಳಿಸಿರುವ ಭಾರತ 15 ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿದೆ.

ದಕ್ಷಿಣ ಆಫ್ರಿಕಾ ಫೈನಲ್ಗೆ: ಅಂತಿಮ ಹಂತದಲ್ಲಿ ಗೋಲು ಗಳಿಸಿದ ದಕ್ಷಿಣ ಆಫ್ರಿಕಾ ತಂಡ ಶುಕ್ರವಾರ ಅಮೆರಿಕಾ ತಂಡವನ್ನು 2–1ರಿಂದ ಮಣಿಸಿ ಎಫ್ಐಎಚ್ ಸಿರೀಸ್ ಹಾಕಿ ಫೈನಲ್ಗೆ ಲಗ್ಗೆಯಿಟ್ಟಿತು.

15ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಅಕಿ ಕೆಪ್ಪೆಲರ್ ಅಮೆರಿಕಾಕ್ಕೆ ಮುನ್ನಡೆ ತಂದುಕೊಟ್ಟರು. 42ನೇ ನಿಮಿಷದಲ್ಲಿ ಅಸ್ಟಿನ್ ಸ್ಮಿತ್ ಗೋಲು ಗಳಿಸಿ ಸಮಬಲ ಸಾಧಿಸಿದರು. ನಂತರ ಪಂದ್ಯ ರೋಚಕವಾಯಿತು. 60ನೇ ನಿಮಿಷದಲ್ಲಿ ಸ್ಪೂನರ್ ನಿಕೋಲಸ್ ಗಳಿಸಿದ ಗೋಲಿನೊಂದಿಗೆ ದಕ್ಷಿಣ ಆಫ್ರಿಕಾ ಸಂಭ್ರಮದ ಅಲೆಯಲ್ಲಿ ಮಿಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.