ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡ್ಮಿಂಟನ್ ಏಷ್ಯಾಜೂನಿಯರ್ ಚಾಂಪಿಯನ್‌ಷಿಪ್‌: 39 ಮಂದಿಯ ಭಾರತ ತಂಡ ಕಣಕ್ಕೆ

20ರಿಂದ ಬ್ಯಾಡ್ಮಿಂಟನ್ ಏಷ್ಯಾಜೂನಿಯರ್ ಚಾಂಪಿಯನ್‌ಷಿಪ್‌
Published 17 ಆಗಸ್ಟ್ 2024, 15:34 IST
Last Updated 17 ಆಗಸ್ಟ್ 2024, 15:34 IST
ಅಕ್ಷರ ಗಾತ್ರ

ನವದೆಹಲಿ: ಇದೇ 20ರಿಂದ 25ರವರೆಗೆ ಚೀನಾದ ಚೆಂಗ್ಡುವಿನಲ್ಲಿ ನಡೆಯಲಿರುವ ಬ್ಯಾಡ್ಮಿಂಟನ್ ಏಷ್ಯಾ (15 ಮತ್ತು 17 ವರ್ಷದೊಳಗಿನವರ) ಜೂನಿಯರ್ ಚಾಂಪಿಯನ್‌ಷಿಪ್‌ಗೆ 39 ಆಟಗಾರರನ್ನು ಒಳಗೊಂಡ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ಮುಂದಿನ ವರ್ಷದ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಭಾರತದ ಆತಿಥ್ಯದಲ್ಲಿ ನಡೆಯಲಿದೆ. ಅದಕ್ಕೆ ಬಲಿಷ್ಠ ತಂಡವನ್ನು ಕಣಕ್ಕಿಳಿಸುವ ಗುರಿ ಹೊಂದಿರುವ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯು ಅದರ ಪೂರ್ವಸಿದ್ಧತೆಯ ಭಾಗವಾಗಿ ಈ ತಂಡವನ್ನು ರಚಿಸಿದೆ.

ಬೆಂಗಳೂರಿನಲ್ಲಿ ಈಚೆಗೆ ನಡೆದ ಟ್ರಯಲ್ಸ್‌ನಲ್ಲಿ ಆಟಗಾರರ ಆಯ್ಕೆ ನಡೆದಿತ್ತು. ಅದರಂತೆ 17 ವರ್ಷದೊಳಗಿನ ತಂಡವನ್ನು ಜ್ಞಾನ ದತ್ತು ಮತ್ತು ತನ್ವಿ ರೆಡ್ಡಿ ಮುನ್ನೆಸಲಿದ್ದಾರೆ. 15 ವರ್ಷದೊಳಗಿನವರ ತಂಡದ ಸಾರಥ್ಯವನ್ನು ಶ್ಯಾಮ್ ಬಿಂಡಿಗನವಿಲೆ ಮತ್ತು ತನ್ವಿ ಪಾತ್ರಿ ವಹಿಸಲಿದ್ದಾರೆ.

ಗುವಾಹಟಿಯ ಎನ್‌ಎಸಿ (ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‌) ಕೇಂದ್ರದಲ್ಲಿ ಪೂರ್ವಸಿದ್ಧತಾ ಶಿಬಿರವನ್ನು ಮುಗಿಸಿರುವ ತಂಡದ ಆಟಗಾರರು ಕೋಚ್‌ನೊಂದಿಗೆ ಶನಿವಾರ ಚೆಂಗ್ಡುಗೆ ಪ್ರಯಾಣ ಬೆಳೆಸಿದ್ದಾರೆ.

‘ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ಗಾಗಿ ಭಾರತವು ಅತಿದೊಡ್ಡ ತಂಡವನ್ನು ಕಣಕ್ಕಿಳಿಸುತ್ತಿದೆ. ಈ ಬಾರಿ ಹೆಚ್ಚಿನ ಪದಕಗಳನ್ನು ನಿರೀಕ್ಷೆ ಮಾಡುತ್ತಿದ್ದೇವೆ’ ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಕಾರ್ಯದರ್ಶಿ ಸಂಜಯ್ ಮಿಶ್ರಾ ಹೇಳಿದ್ದಾರೆ.

ಕಳೆದ ಆವೃತ್ತಿಯಲ್ಲಿ ಭಾರತ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚು ಗೆದ್ದಿತ್ತು. ಬೋರ್ನಿಲ್ ಆಕಾಶ್‌ ಚಾಂಗ್‌ಮಾಯಿ ಅವರು 15 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದರು.

ಶೈನಾ ಮಣಿಮುತ್ತು ಎರಡು ಪಂದ್ಯಗಳಲ್ಲಿ ಭಾಗವಹಿಸುವ ಏಕೈಕ ಆಟಗಾರ್ತಿಯಾಗಿದ್ದಾರೆ. ಅವರು 17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಮತ್ತು ಕರ್ನಾಟಕದ ಐಕ್ಯಾ ಶೆಟ್ಟಿ ಅವರೊಂದಿಗೆ ಡಬಲ್ಸ್‌ನಲ್ಲಿ ಆಡುವರು.

ತಂಡ ಹೀಗಿದೆ:

15 ವರ್ಷದೊಳಗಿನವರು: ಬಾಲಕರ ಸಿಂಗಲ್ಸ್‌: ಶ್ಯಾಮ್ ಬಿಂಡಿಗನವಿಲೆ, ಶಶಾಂಕ್ ವನಮಾಲ, ಪ್ರಾಂಗನ್ ಚೌಧರಿ, ಪುಷ್ಕರ್ ಸಾಯಿ. ಬಾಲಕಿಯರ ಸಿಂಗಲ್ಸ್‌: ತನ್ವಿ ಪಾತ್ರಿ, ಶೈನಾ ಮಣಿಮುತ್ತು, ಗಾಥಾ ಸೂರ್ಯವಂಶಿ, ಹಿತಶ್ರೀ ಎಲ್. ರಾಜಯ್ಯ

ಬಾಲಕರ ಡಬಲ್ಸ್‌: ರಾಹುಲ್ ಕಡಪಾಕುಲ/ ವೇದಾಂತ್ ಪಹ್ವಾ, ಶಾಶ್ವತ್ ಚೌಧರಿ/ ಶೌರ್ಯ ಚೌಧರಿ. ಬಾಲಕಿಯರ ಡಬಲ್ಸ್: ಶೈನಾ ಮಣಿಮುತ್ತು/ ಐಕ್ಯ ಶೆಟ್ಟಿ, ನಿಧಿ ಆತ್ಮರಾಮ್/ಸೆಲ್ವಸಮೃದ್ಧಿ ಸೆಲ್ವಪ್ರಭು

ಮಿಶ್ರ ಡಬಲ್ಸ್: ಸಾಹಿದ್ ಇಬ್ರಾಹಿಂ ಪೀರ್/ಧೀಶಿತ ಸಿಂಘ ಗೋಪಿನಾಥ್ ಸಿಂಗ್, ಕವೆಯುಗನ್ ಕೆ.ಎ./ಅನುಷ್ಕಾ ಜೆನ್ನಿಫರ್ ಎ.ಎಸ್.

17 ವರ್ಷದೊಳಗಿನವರು: ಬಾಲಕರ ಸಿಂಗಲ್ಸ್: ಜ್ಞಾನ ದತ್ತು ಟಿ.ಟಿ, ಪ್ರತೀಕ್ ಕೌಂಡಿಲ್ಯ, ದೇವ್ ರೂಪರೇಲಿಯಾ, ಅಭಿನವ್ ಗರ್ಗ್. ಬಾಲಕಿಯರ ಸಿಂಗಲ್ಸ್: ತನ್ವಿ ರೆಡ್ಡಿ, ಆದರ್ಶಿಶ್ರೀ ಎನ್‌.ಬಿ., ಪಾರುಲ್ ಚೌಧರಿ, ದುರ್ಗಾ ಇಶಾ ಕಂದ್ರಪು

ಬಾಲಕರ ಡಬಲ್ಸ್: ಬ್ಜ್ರೋನ್ ಜೈಸನ್/ಆತೀಶ್ ಶ್ರೀನಿವಾಸ್‌ ಪಿ.ವಿ, ಅಭಿನವ್ ಕಂದಾರಿ/ಯೋಗಾಂಶ್. ಬಾಲಕಿಯರ ಡಬಲ್ಸ್: ಅನ್ನಯಾ ಬಿಷ್ಟ್/ ಏಂಜೆಲ್ ಪುನೇರಾ, ದಿಯಾ ಭೀಮಯ್ಯ ಬಿ./ಬರುನಿ ಪಾರ್ಶ್ವಾಲ್

ಮಿಶ್ರ ಡಬಲ್ಸ್: ಶೋರ್ಯಾ ಕಿರಣ್ ಜೆ./ ಕೀರ್ತಿ ಮಂಚಾಲ, ಮನೀಶ್ ರೆಡ್ಡಿ/ದೀಪಕ್ ರಾಜ್ ಅದಿತಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT