ಚಾಂಗ್‌ಝೌ (ಚೀನಾ): ವಿಶ್ವದ ಎರಡನೇ ಕ್ರಮಾಂಕದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ ಚೀನಾ ಓಪನ್ ಸೂಪರ್ 1000 ಟೂರ್ನಿಯ ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲೇ ಇಂಡೊನೇಷ್ಯಾ ಆಟಗಾರರ ಎದುರು ಅಚ್ಚರಿಯ ಸೋಲನುಭವಿಸಿದರು. ಇದರೊಂದಿಗೆ ಈ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

ಬುಧವಾರ ನಡೆದ ಪಂದ್ಯದಲ್ಲಿ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ನರಾದ ಭಾರತದ ಜೋಡಿ 17–21, 21–11, 17–21ರಲ್ಲಿ ಇಂಡೊನೇಷ್ಯಾದ ಮುಹಮ್ಮದ್ ಶೊಹಿಬುಲ್ ಫಿಕ್ರಿ– ಮೌಲಾನಾ ಬಾಗಾ ಜೋಡಿ ಎದುರು ಸೋಲನುಭವಿಸಿತು. ವಿಶ್ವ ಕ್ರಮಾಂಕದಲ್ಲಿ 13ನೇ ಸ್ಥಾನದಲ್ಲಿರುವ ಶೊಹಿಬುಲ್– ಮೌಲಾನಾ ಜೋಡಿ ಗೆಲ್ಲಲು ಒಂದು ಗಂಟೆ ಎಂಟು ನಿಮಿಷ ತೆಗೆದುಕೊಂಡಿತು.

ಭಾರತದ ಮಿಕ್ಸೆಡ್ ಡಬಲ್ಸ್ ಜೋಡಿಯಾದ ಸಿಕ್ಕಿ ರೆಡ್ಡಿ– ರೋಹನ್ ಕಪೂರ್ ಅವರೂ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಮಲೇಷ್ಯಾದ ಚೆನ್ ಟಾಂಗ್ ಜಿ– ತೊ ಇ ವೀ ಜೋಡಿ 21–15, 21–16ರಲ್ಲಿ ನೇರ ಆಟಗಳಿಂದ ಭಾರತದ ಜೋಡಿ ಮೇಲೆ ಜಯಗಳಿಸಿತು.

ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಎಚ್.ಎಸ್.ಪ್ರಣಯ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಚಾಪಿಯನ್ ಲಕ್ಷ್ಯ ಸೇನ್ ಅವರೂ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.

ಏಷ್ಯನ್ ಗೇಮ್ಸ್‌ಗೆ ಸ್ವಲ್ಪ ಮೊದಲು ಈ ರೀತಿಯ ಫಲಿತಾಂಶ ಸಾತ್ವಿಕ್– ಚಿರಾಗ್ ಜೋಡಿಗೆ ತೀವ್ರ ನಿರಾಸೆ ಮೂಡಿಸಿದೆ. ಇವರಿಬ್ಬರು ಸ್ವಿಸ್ ಓಪನ್, ಕೊರಿಯಾ ಓಪನ್ ಮತ್ತು ಇಂಡೊನೇಷ್ಯಾ ಓಪನ್ ಟೂರ್ನಿಗಳಲ್ಲಿ ಯಶಸ್ಸು ಕಂಡಿದ್ದರು. ಇವರಿಬ್ಬರು, ಇಂಡೊನೇಷ್ಯಾದ ಈ ಜೋಡಿಗೆ ಸೋಲುತ್ತಿರುವುದು ಇದು ಎರಡನೇ ಸಲ. ಫಿಕ್ರಿ–ಮೌಲಾನಾ ಜೋಡಿ ಈ ಮೊದಲು ಥಾಯ್ಲೆಂಡ್ ಓಪನ್ ಟೂರ್ನಿಯ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಆಟಗಾರರನ್ನು ಸೋಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.