ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೂಟಿಂಗ್‌ ಚಾಂಪಿಯನ್‌ಷಿಪ್‌: ಭಾರತ ತಂಡಗಳ ಚಿನ್ನದ ಸಾಧನೆ

Published : 29 ಸೆಪ್ಟೆಂಬರ್ 2024, 15:31 IST
Last Updated : 29 ಸೆಪ್ಟೆಂಬರ್ 2024, 15:31 IST
ಫಾಲೋ ಮಾಡಿ
Comments

ನವದೆಹಲಿ: ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಪೆರುನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ನ 10 ಮೀಟರ್‌ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಚಿನ್ನದ ಸಾಧನೆ ಮಾಡಿದವು.

ಉಮೇಶ್ ಚೌಧರಿ, ಪ್ರದ್ಯುಮ್ನ ಸಿಂಗ್ ಮತ್ತು ಮುಖೇಶ್ ನೆಲವಳ್ಳಿ ಅವರನ್ನು ಒಳಗೊಂಡ ಪುರುಷರ ತಂಡವು 1726 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಅದಕ್ಕಿಂತ 10 ಅಂಕ ಕಡಿಮೆ ಪಡೆದ ರೊಮೇನಿಯಾ ಬೆಳ್ಳಿ ಗೆದ್ದಿತು. ಇಟಲಿ (1707) ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.

ಉಮೇಶ್ ಚೌಧರಿ ಅವರು ಫೈನಲ್‌ಗೆ ತಡವಾಗಿ ವರದಿ ಮಾಡಿದ್ದಕ್ಕಾಗಿ ಎರಡು ಅಂಕಗಳನ್ನು ದಂಡದ ರೂಪದಲ್ಲಿ ಕಳೆದುಕೊಂಡರು. ಹೀಗಾಗಿ, ಪದಕದ ಅವಕಾಶ ಕೈತಪ್ಪಿತು.

ಚೌಧರಿ ಮತ್ತು ಪ್ರದ್ಯುಮ್ನ ಅವರು ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿ ಫೈನಲ್‌ಗೆ ಪ್ರವೇಶಿಸಿದ್ದರು. ಅಲ್ಲಿ ಚೌಧರಿ ಆರನೇ ಮತ್ತು ಪ್ರದ್ಯುಮ್ನ ಎಂಟನೇ ಸ್ಥಾನ ಗಳಿಸಿದರು. ರೊಮೇನಿಯಾದ ಲುಕಾ ಜೊಲ್ಡಿಯಾ ಚಿನ್ನ ಗೆದ್ದರೆ, ಚೀನಾ ತೈಪೆಯ ಹ್ಸಿಯಾಂಗ್-ಚೆನ್ ಬೆಳ್ಳಿ ಗೆದ್ದರು. 

ಕನಿಷ್ಕಾ ದಾಗರ್, ಲಕ್ಷಿತಾ ಮತ್ತು ಅಂಜಲಿ ಚೌಧರಿ ಅವರ ಸಂಯೋಜನೆಯ ಮಹಿಳಾ ತಂಡ 1708 ಪಾಯಿಂಟ್ಸ್‌ ಗಳಿಸಿತು. ಭಾರತಕ್ಕಿಂತ 1 ಅಂಕ ಕಡಿಮೆ ಪಡೆದ ಅಜರ್‌ಬೈಜಾನ್ ಬೆಳ್ಳಿ ಮತ್ತು ಉಕ್ರೇನ್ ಕಂಚು ಗೆದ್ದಿತು.

ಮಹಿಳೆಯರ ವೈಯಕ್ತಿಕ ಸ್ಪರ್ಧೆಯಲ್ಲಿ ಕನಕ್ 217.6 ಅಂಕಗಳೊಂದಿಗೆ ಕಂಚು ಗೆದ್ದರೆ, ಕನಿಷ್ಕಾ ದಾಗರ್ ಎಂಟನೇ ಸ್ಥಾನ ಪಡೆದರು. ಚೀನಾ ತೈಪೆಯ ಚೆನ್ ಯು-ಚುನ್ ಚಿನ್ನ ಗೆದ್ದರೆ, ಸ್ಲೋವಾಕಿಯಾದ ಮಾಂಜಾ ಸ್ಲಾಕ್ ಬೆಳ್ಳಿ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT