ಟೋಕಿಯೊ: ಭಾರತದ ಸಾಯಿ ಪ್ರಣೀತ್ ಅವರು ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸುವುದರೊಂದಿಗೆ ಜಪಾನ್ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಸವಾಲು ಅಂತ್ಯವಾಗಿದೆ.

ಪ್ರಣೀತ್, ಸ್ಥಳೀಯ ಆಟಗಾರ, ಅಗ್ರ ಶ್ರೇಯಾಂಕದ ಕೆಂಟೊ ಮೊಮೊಟಾ ಎದುರು ಶನಿವಾರ 18–21, 12–21ರಿಂದ ಸೋತರು.

ಈ ವರ್ಷದ ಆರಂಭದಲ್ಲಿ ನಡೆದ ಸಿಂಗಪುರ ಓಪನ್ ಟೂರ್ನಿಯಲ್ಲೂ ಮೊಮೊಟಾ ಎದುರು ಭಾರತದ ಆಟಗಾರ ಮಣಿದಿದ್ದರು.

ಶುಕ್ರವಾರ ಇಂಡೊನೇಷ್ಯಾದ ಟಾಮಿ ಸುಗಿಯಾರ್ತೊ ಅವರನ್ನು ಸೋಲಿಸಿ ಪ್ರಣೀತ್ ಸೆಮಿಫೈನಲ್ ತಲುಪಿದ್ದರು. ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಅಭಿಯಾನ ಶುಕ್ರವಾರವೇ ಕೊನೆಗೊಂಡಿತ್ತು. ಪಿ.ವಿ.ಸಿಂಧು ಅವರು ಜಪಾನ್‌ನ ಅಕಾನೆ ಯಮಗುಚಿ ಎದುರು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಎಡವಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.