ಕೈರೊ: ಮಹಿಳಾ ಬ್ಲಾಕ್ ಬಾಲ್ ಸ್ಕ್ವಾಷ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ.

ಸಿಂಗಲ್ಸ್ ವಿಭಾಗದಲ್ಲಿ ಕಣದಲ್ಲಿದ್ದ ಜೋಷ್ನಾ ಚಿಣ್ಣಪ್ಪ, ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.

ಬುಧವಾರ ರಾತ್ರಿ ನಡೆದ ಪೈಪೋಟಿಯಲ್ಲಿ ನ್ಯೂಜಿಲೆಂಡ್‌ನ ಜೋಯೆಲೆ ಕಿಂಗ್ 7–11, 12–10, 2–11, 11–5, 11–8ರಲ್ಲಿ ಭಾರತದ ಆಟಗಾರ್ತಿಯನ್ನು ಮಣಿಸಿದರು. ಈ ಹೋರಾಟ 64 ನಿಮಿಷ ನಡೆಯಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಜೋಯೆಲೆ ಎದುರು ಜೋಷ್ನಾ ದಿಟ್ಟ ಆಟ ಆಡಿದರು. ಮೊದಲ ಗೇಮ್‌ನಲ್ಲಿ ಗೆದ್ದು ಭರವಸೆ ಮೂಡಿಸಿದ್ದ ಭಾರತದ ಆಟಗಾರ್ತಿ, ಮರು ಗೇಮ್‌ನಲ್ಲಿ ನಿರಾಸೆ ಕಂಡರು. ಹೀಗಾಗಿ 1–1 ಸಮಬಲ ಕಂಡುಬಂತು.

ಮೂರನೇ ಗೇಮ್‌ನಲ್ಲಿ ಜೋಷ್ನಾ ಮಿಂಚಿದರು. ಚುರುಕಿನ ರಿಟರ್ನ್ ಮತ್ತು ಡ್ರಾಪ್‌ಗಳ ಮೂಲಕ ಪಾಯಿಂಟ್ಸ್ ಕಲೆಹಾಕಿದ ಭಾರತದ ಆಟಗಾರ್ತಿ, ಎದುರಾಳಿಯನ್ನು ಕಂಗೆಡಿಸಿ 2–1 ಮುನ್ನಡೆ ಪಡೆದರು.

ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ನ್ಯೂಜಿಲೆಂಡ್‌ನ ಆಟಗಾರ್ತಿ ನಂತರ ಪ್ರಾಬಲ್ಯ ಮೆರೆದರು. ನಾಲ್ಕು ಮತ್ತು ಐದನೇ ಗೇಮ್‌ಗಳಲ್ಲಿ ಪರಿಣಾಮಕಾರಿ ಆಟ ಆಡಿ ಗೆಲುವಿನ ತೋರಣ ಕಟ್ಟಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.