ಬೆಂಗಳೂರು: ಜೆಎಸ್‌ಡಬ್ಲ್ಯುಸಮೂಹ, ಬಳ್ಳಾರಿಯ ವಿಜಯನಗರದಲ್ಲಿ ಸ್ಥಾಪಿಸಿರುವ ದಿ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ (ಐಐಎಸ್) ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಬುಧವಾರ ನಡೆಯಿತು.

42 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿ ರುವ ಐಐಎಸ್, ಭಾರತದ ಮೊದಲ (ಖಾಸಗಿ ಒಡೆತನದ) ಹೈ ಪರ್ಫಾರ್ಮನ್ಸ್ ತರಬೇತಿ ಸಂಸ್ಥೆ ಎಂಬ ಹಿರಿಮೆ ಹೊಂದಿದೆ.

ಅತ್ಯಾಧುನಿಕ ಮೂಲಕ ಸೌಕರ್ಯ ಹೊಂದಿರುವ ಈ ಸಂಸ್ಥೆಯಲ್ಲಿ ಒಟ್ಟು 300 ಅಥ್ಲೀಟ್‌ಗಳು ತರಬೇತಿ ಪಡೆಯಬಹು ದಾಗಿದೆ. ಬಾಕ್ಸಿಂಗ್, ಅಥ್ಲೆಟಿಕ್ಸ್, ಈಜು, ಜೂಡೊ ಮತ್ತು ಕುಸ್ತಿಪಟುಗಳಿಗೆ ಇಲ್ಲಿ ನುರಿತ ಕೋಚ್‌ಗಳಿಂದ ವಿಶೇಷ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ.

ಐಎಎಎಫ್ ಮಾನ್ಯತೆ ಹೊಂದಿರುವ 400 ಮೀಟರ್ಸ್ ಅಥ್ಲೆಟಿಕ್ಸ್ ಟ್ರ್ಯಾಕ್, ಫಿನಾ ಮಾನ್ಯತೆ ಹೊಂದಿರುವ ಈಜುಕೊಳ, ಮೂರು ಜೂಡೊ ಮತ್ತು ಕುಸ್ತಿ ಮ್ಯಾಟ್‌ಗಳು ಮತ್ತು ಮೂರು ಬಾಕ್ಸಿಂಗ್ ರಿಂಗ್‌ಗಳು ಈ ಸಂಸ್ಥೆಯಲ್ಲಿವೆ.

‘ನಮ್ಮ ದೇಶದಲ್ಲಿ ಅತ್ಯಾಧುನಿಕ ಮೂಲ ಸೌಕರ್ಯಗಳಿಲ್ಲ. ಹೀಗಾಗಿ ಒಲಿಂಪಿಕ್ಸ್ ಕೂಟದಲ್ಲಿ ಹೆಚ್ಚು ಪದಕಗಳನ್ನು ಗೆಲ್ಲಲು ಅಥ್ಲೀಟ್‌ಗಳು ವಿಫಲರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ, ಅಮೆರಿಕಾದ ಅಥ್ಲೀಟ್‌ಗಳ ಹಾಗೆ ನಮ್ಮವರೂ ಒಲಿಂಪಿಕ್ಸ್‌ನಲ್ಲಿ ಪದಕಗಳ ಬೇಟೆಯಾಡ ಬೇಕು. ಈ ನಿಟ್ಟಿನಲ್ಲಿ ಅವರನ್ನು ಸಜ್ಜುಗೊಳಿಸಬೇಕು ಎಂಬ ಉದ್ದೇಶದೊಂದಿಗೆ ಸಂಸ್ಥೆಯನ್ನು ಆರಂಭಿಸಿದ್ದೇವೆ’ ಎಂದು ಐಐಎಸ್ ಸಂಸ್ಥಾಪಕ ಪಾರ್ಥ ಜಿಂದಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಭಾರತದ ಪ್ರತಿಭಾವಂತ ಅಥ್ಲೀಟ್‌ಗಳನ್ನು ಗುರುತಿಸಿ ಅವರಿಗೆ ಸಂಸ್ಥೆಯಲ್ಲಿ ವಸತಿ ಸಹಿತ ತರಬೇತಿ ನೀಡಲು ನಿರ್ಧರಿಸಿದ್ದೇವೆ’ ಎಂದೂ ಹೇಳಿದ್ದಾರೆ.

ಒಲಿಂಪಿಯನ್‌ಗಳಾದ ಬಲ್ಬೀರ್ ಸಿಂಗ್ ಸೀನಿಯರ್, ಅಭಿನವ್ ಬಿಂದ್ರಾ, ಹಿರಿಯ ಟೆನಿಸ್ ಆಟಗಾರ ಮಹೇಶ್ ಭೂಪತಿ, ಶೂಟರ್ ಅಂಜಲಿ ಭಾಗ್ವತ್ ಮತ್ತು ಹಿರಿಯ ಕುಸ್ತಿಪಟು ಮಹಾವೀರ್ ಪೋಗಟ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.