ನವದೆಹಲಿ: ಖೇಲೊ ಇಂಡಿಯಾ ಮಹಿಳಾ ಲೀಗ್‌ನ ನಾಲ್ಕನೇ ಆವೃತ್ತಿಯು ದಕ್ಷಿಣ ವಲಯ ವುಶು ಲೀಗ್‌ನೊಂದಿಗೆ ಇದೇ 10ರಂದು ಬಾಗಲಕೋಟೆಯಲ್ಲಿ ಚಾಲನೆ ದೊರೆಯಲಿದೆ.

ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಸುಮಾರು 300 ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ. ಸಾಂಡಾ ಮತ್ತು ತೌಲು ಕೆಟಗರಿಯಲ್ಲಿ ಸ್ಪರ್ಧೆಗಳು ನಡೆಯಲಿವೆ.

ಕರ್ನಾಟಕ, ಆಂಧ್ರಪ್ರದೇಶ, ಪಾಂಡಿಚೇರಿ, ತಮಿಳುನಾಡು, ಕೇರಳ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ ಮತ್ತು ಒಡಿಶಾದ ವುಶು ಆಟಗಾರರಿಗೆ ಮುಕ್ತ ಪ್ರವೇಶವಿದೆ.

2023–24ರ ಆವೃತ್ತಿಯು ಯಶಸ್ವಿಯಾಗಿ ನಡೆದಿದ್ದು, ಒಟ್ಟು 502 ಟೂರ್ನಿಗಳನ್ನು ಆಯೋಜಿಸಲಾಗಿದೆ. 18 ಕ್ರೀಡೆಗಳಲ್ಲಿ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 56 ಸಾವಿರ ಮಹಿಳಾ ಅಥ್ಲೀಟ್‌ಗಳು ಪಾಲ್ಗೊಂಡಿದ್ದಾರೆ.

ದಕ್ಷಿಣ ವಲಯದ ಈ ಟೂರ್ನಿ ಋತುವಿನ ಮೊದಲ ವುಶು ಲೀಗ್ ಆಗಿದೆ. ನಂತರ ಕ್ರಮವಾಗಿ ಪೂರ್ವ ವಲಯ, ಉತ್ತರ ವಲಯ ಮತ್ತು ಪಶ್ಚಿಮ ವಲಯಗಳಲ್ಲಿ ಸ್ಪರ್ಧೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.