ನವದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರವು ಸೋಮವಾರದಿಂದ ಖೇಲೊ ಇಂಡಿಯಾ ಇ–ಪಾಠಶಾಲಾ ಆನ್ಲೈನ್ ತರಬೇತಿಯನ್ನು ಆರಂಭಿಸಲಿದೆ.

ರಾಷ್ಟ್ರೀಯ ಕ್ರೀಡಾ ಫೆಡರೇಷನ್ಗಳು (ಎನ್ಎಸ್ಎಫ್) ಸಾಯ್ನೊಂದಿಗೆ ಕೈಜೋಡಿಸಲಿವೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಆದಿವಾಸಿ ವ್ಯವಹಾರಗಳ ಸಚಿವ ಮತ್ತು ಭಾರತ ಆರ್ಚರಿ ಸಂಸ್ಥೆಯ ಅಧ್ಯಕ್ಷ ಅರ್ಜುನ್ ಮುಂಡಾ ಅವರು ಬೆಳಿಗ್ಗೆ 9 ಗಂಟೆಗೆ ಇ–ಪಾಠಾಶಾಲಾ ಉದ್ಘಾಟಿಸಲಿದ್ದಾರೆ.

ಈ ಸಂದರ್ಭದಲ್ಲಿ ಆರ್ಚರಿಪಟುಗಳು, ಕೋಚ್ ಮತ್ತು ಪರಿಣತರು ಹಾಜರಿರುವರು. ಈ ಕಾರ್ಯಕ್ರಮದಲ್ಲಿ ಒಟ್ಟು 21 ಕ್ರೀಡೆಗಳ ಆನ್ಲೈನ್ ತರಬೇತಿ ನೀಡಲಾಗುವುದು. ಅಥ್ಲೆಟಿಕ್ಸ್, ಆರ್ಚರಿ, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್ಬಾಲ್, ಜಿಮ್ನಾಸ್ಟಿಕ್ಸ್, ಹಾಕಿ, ಜುಡೊ, ಕಯಾಕಿಂಗ್, ಕೆನೋಯಿಂಗ್, ಕಬಡ್ಡಿ, ಪ್ಯಾರಾ ಗೇಮ್ಸ್, ರೋಯಿಂಗ್, ಶೂಟಿಂಗ್, ಟೇಕ್ವಾಂಡೋ, ಟೇಬಲ್ ಟೆನಿಸ್, ವಾಲಿಬಾಲ್, ವೇಟ್ ಲಿಫ್ಟಿಂಗ್, ಕುಸ್ತಿ ಮತ್ತು ವುಶು ಕ್ರೀಡೆಗಳು ಇದರಲ್ಲಿ ಸೇರಿವೆ.

ಪರಿಣತ ಕೋಚ್ಗಳು, ಹಿರಿಯ ಆಟಗಾರರು, ಕ್ರೀಡಾ ವಿಜ್ಞಾನಿಗಳು, ಹೈಪರ್ಫಾರ್ಮೆನ್ಸ್ ನಿರ್ದೇಶಕರು, ವ್ಯವಸ್ಥಾಪಕರು ಇರುವ ಸಮಿತಿಯು ಮೇಲ್ಚಿಚಾರಣೆ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.