ಭಾನುವಾರ, 30 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

400 ಮೀಟರ್ ಓಟ: ಕಿರಣ್‌ಗೆ ಒಲಿಂಪಿಕ್ಸ್‌ ಟಿಕೆಟ್

Published 27 ಜೂನ್ 2024, 20:24 IST
Last Updated 27 ಜೂನ್ 2024, 20:24 IST
ಅಕ್ಷರ ಗಾತ್ರ

ಪಂಚಕುಲ (ಹರಿಯಾಣ): ಹರಿಯಾಣದ ಕಿರಣ್ ಪಹಲ್ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ್ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ 400 ಮೀಟರ್ ಓಟದಲ್ಲಿ 50.92 ಸೆಕೆಂಡುಗಳಲ್ಲಿ ಗುರಿ ತಲುಪಿ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ.

ಮಹಿಳೆಯರ 400 ಮೀಟರ್ ಓಟದಲ್ಲಿ ಅರ್ಹತಾ ಮಾನದಂಡವನ್ನು 50.95 ಸೆಕೆಂಡುಗಳಿಗೆ ನಿಗದಿ ಪಡಿಸಲಾಗಿತ್ತು. ಪ್ರಸಕ್ತ ಋತುವಿನಲ್ಲಿ ಇದು ಕಿರಣ್‌ ಅವರ ಅತ್ಯುತಮ ಸಾಧನೆಯಾಗಿದೆ.  

ಗುಜರಾತ್‌ನ ದೇವಿ ಅನಿಬಾ ಝಾಲಾ (53.44 ಸೆಕೆಂಡ್) ಎರಡನೇ ಸ್ಥಾನ ಪಡೆದರೆ, ಕೇರಳದ ಸ್ನೇಹಾ ಕೆ (53.51 ಸೆಕೆಂಡ್) ಮೂರನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT