ಮಡಿಕೇರಿ: ಪ್ರತಿ ವರ್ಷ ಏಪ್ರಿಲ್, ಮೇನಲ್ಲಿ ನಡೆಯುತ್ತಿದ್ದ ‘ಕೊಡವ ಕೌಟುಂಬಿಕ ಹಾಕಿ ಉತ್ಸವ’ ಈ ವರ್ಷವೂ ರದ್ದಾಗಿದೆ.

‘ಕಳೆದ ವರ್ಷ ಪ್ರಕೃತಿ ವಿಕೋಪದಿಂದ ಹಾಕಿ ಉತ್ಸವ ರದ್ದಾಗಿತ್ತು. ಈ ವರ್ಷ ಕೊರೊನಾ ವೈರಸ್ ಭೀತಿಯು ಉತ್ಸವದ ಸಂಭ್ರಮವನ್ನು ಕಸಿದಿದೆ. ಹೀಗಾಗಿ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ’ ಎಂದು ಮುಕ್ಕಾಟಿರ ಹಾಕಿ ನಮ್ಮೆ ಅಧ್ಯಕ್ಷ ಮುಕ್ಕಾಟಿರ ಚೋಟು ಉತ್ತಯ್ಯ ಮಂಗಳವಾರ ತಿಳಿಸಿದರು.

ಏ.19ರಿಂದ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡುವಿನಲ್ಲಿ ಹಾಕಿ ಉತ್ಸವ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕೊಡವ ಕುಟುಂಬದ ಹಲವು ತಂಡಗಳು ಹೆಸರು ನೋಂದಣಿ ಮಾಡಿಕೊಂಡಿದ್ದವು. ಎರಡು ಪ್ರತ್ಯೇಕ ಮೈದಾನಗಳಲ್ಲಿ ಪಂದ್ಯ ನಡೆಸಲುಮುಕ್ಕಾಟಿರ ಕುಟುಂಬಸ್ಥರು ಸಿದ್ಧತೆಮಾಡಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.