ಸಿಂಗಪುರ: ಅನುಭವಿ ಆಟಗಾರ್ತಿ ಮಣಿಕಾ ಬಾತ್ರಾ ಅವರು ಸಿಂಗಪುರ ಸ್ಮ್ಯಾಷ್ ಟೇಬಲ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ಮತ್ತು ಮಿಕ್ಸಡ್ ಡಬಲ್ಸ್ ವಿಭಾಗಗಳಲ್ಲಿ ಸೋತರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲಿಗೆ ತೆರೆಬಿತ್ತು.

ಮಣಿಕಾ ಮತ್ತು ಸತ್ಯನ್ ಜೋಡಿ ಮಂಗಳವಾರ ನಡೆದ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ 9-11, 9-11, 11-8, 11-5, 7-11 ರಲ್ಲಿ ಜಪಾನ್ನ ಹಿನಾ ಹಯಾತ– ತೊಮೊಕಜು ಹರಿಮೊಟೊ ಎದುರು ಪರಾಭವಗೊಂಡಿತು.

ವಿಶ್ವ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಗೆದ್ದಿದ್ದ ಜಪಾನ್ ಸ್ಪರ್ಧಿಗಳಿಗೆ ತಕ್ಕ ಪೈಪೋಟಿ ನೀಡಲು ಭಾರತದ ಜೋಡಿ ಯಶಸ್ವಿಯಾಯಿತು. ಈ ಹಣಾಹಣಿ 52 ನಿಮಿಷ ನಡೆಯಿತು.

ಟೂರ್ನಿಯಲ್ಲಿ ಆರನೇ ಶ್ರೇಯಾಂಕ ಹೊಂದಿದ್ದ ಮಣಿಕಾ–ಸತ್ಯನ್ ಜೋಡಿ 16ರ ಘಟ್ಟದ ಪಂದ್ಯದಲ್ಲಿ 11-7, 12-10, 9-11, 11-3 ರಲ್ಲಿ ಸಿಂಗಪುರದ ಜಿಯಾನ್ ಜೆಂಗ್– ಚೆವ್ ಜೆ ಯು ಕ್ಲಾರೆನ್ಸ್ ಅವರನ್ನು ಮಣಿಸಿತ್ತು.

ಮಹಿಳೆಯರ ಡಬಲ್ಸ್ನಲ್ಲಿ ಮಣಿಕಾ ಮತ್ತು ಅರ್ಚನಾ ಕಾಮತ್ ಜೋಡಿ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ 2-11, 6-11, 15-13, 12-10, 6-11 ರಲ್ಲಿ ಚೀನಾದ ಮೆಂಗ್ ಚೆನ್– ಯಿದಿ ವಾಂಗ್ ಎದುರು ಪರಾಭವಗೊಂಡಿತು.

ಮಣಿಕಾ, ಸತ್ಯನ್ ಮತ್ತು ಶರತ್ ಕಮಲ್ ಅವರು ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಸೋತಿದ್ದರು. ಪುರುಷರ ಡಬಲ್ಸ್ನಲ್ಲಿ ಹರ್ಮೀತ್ ದೇಸಾಯಿ– ಮಾನವ್ ಥಾಕರ್ ಜೋಡಿ ಆರಂಭಿಕ ಸುತ್ತಿನಲ್ಲಿ ಎಡವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.