ನವದೆಹಲಿ: ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ತಮ್ಮ ಜರ್ಮನಿಯ ಕೋಚ್ ಕ್ಲಾಸ್ ಬರ್ಟೋನೀಟ್ಜ್ ಅವರಿಗೆ ಬುಧವಾರ ಭಾವನಾತ್ಮಕ ವಿದಾಯ ಹೇಳಿದರು. ಕೌಟುಂಬಿಕ ಬದ್ಧತೆಯ ಕಾರಣ ನೀಡಿ ಬರ್ಟೋನೀಟ್ಜ್ ಅವರು ಐದು ವರ್ಷಗಳ ಒಪ್ಪಂದ ಕೊನೆಗೊಳಿಸಿದ್ದಾರೆ.

ನೀರಜ್ ಅವರು ಟೋಕಿಯೊ ಒಲಿಂಪಿಕ್ಸ್ ಚಿನ್ನ, ಈ ವರ್ಷ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಸೇರಿದಂತೆ ಹಲವು ಪದಕಗಳನ್ನು ಗೆಲ್ಲುವಲ್ಲಿ 75 ವರ್ಷ ವಯಸ್ಸಿನ ಕೋಚ್ ಅವರು ಮಾರ್ಗದರ್ಶನ ನೀಡಿದ್ದರು.

‘ಎಲ್ಲಿಂದ ಆರಂಭಿಸಬೇಕೆಂದು ಗೊತ್ತಿಲ್ಲದೇ ಇದನ್ನು ಬರೆದಿದ್ದೇನೆ. ನನಗೆ ನೀವು ಮಾರ್ಗದರ್ಶಕನಿಗಿಂತ ಹೆಚ್ಚಿನ ಸ್ಥಾನದಲ್ಲಿದ್ದವರು. ನೀವು ಕಲಿಸಿದ ಎಲ್ಲವೂ ಅಥ್ಲೀಟ್ ಮತ್ತು ವ್ಯಕ್ತಿಯಾಗಿ ನನಗೆ ನೆರವಾಗಿದೆ. ಪ್ರತಿ ಸ್ಪರ್ಧೆಗಳಲ್ಲಿ ನಾನು ಮಾನಸಿಕ ಮತ್ತು ದೈಹಿಕವಾಗಿ ಸಜ್ಜಾಗುವಂತೆ ನೋಡಿಕೊಂಡಿದ್ದೀರಿ’ ಎಂದು ಚೋಪ್ರಾ ಎಕ್ಸ್ನಲ್ಲಿ ಬರೆದಿದ್ದಾರೆ.

‘ನಿಮ್ಮ ನಗು ಮತ್ತು ತಮಾಷೆಯ ಮಾತುಗಳು ಮನಸ್ಸಿನಿಂದ ಎಂದಿಗೂ ಮರೆಯಾಗುವುದಿಲ್ಲ’ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.