ಬಿಲ್ಗ್ರೇಡ್: ಮುಂದಿನ ತಿಂಗಳಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಗೂ ಮೊದಲು ನಡೆಯುವ ಎಟಿಪಿ ಕಪ್ ಟೂರ್ನಿಯಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ಪಾಲ್ಗೊಳ್ಳುವುದಿಲ್ಲ ಎಂದು ಅವರ ತಂಡ ಶನಿವಾರ ತಿಳಿಸಿದೆ.

’ಜೊಕೊವಿಚ್ ಅವರು ಬಿಲ್ಗ್ರೇಡ್ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಎಟಿಪಿ ಕಪ್ ಟೂರ್ನಿಯಲ್ಲಿ ಆಡುವುದಿಲ್ಲ ಎಂಬುದು ಖಚಿತ’ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದರು. ಲಸಿಕೆ ಹಾಕಿಸಿಕೊಳ್ಳಲು ಮುಂದಾಗದ ಕಾರಣ ಅವರು ಆಸ್ಟ್ರೇಲಿಯನ್ ಓಪನ್ನಲ್ಲಿ ಆಡುವುದು ಕೂಡ ಸಂದೇಹ.

ಸಿಡ್ನಿಯಲ್ಲಿ ನಡೆಯಲಿರುವ ಎಟಿಪಿ ಕಪ್ ಟೂರ್ನಿ ಮೂಲಕ ಪ್ರತಿ ವರ್ಷ ಪುರುಷರ ಟೆನಿಸ್ ಋತು ಆರಂಭವಾಗುತ್ತದೆ.

ಜನವರಿ 17ರಿಂದ ಆಸ್ಟ್ರೇಲಿಯನ್ ಓಪನ್ ಟೂರ್ನಿ ನಡೆಯಲಿದ್ದು ಇದರಲ್ಲಿ ಚಾಂಪಿಯನ್ ಆದರೆ ಜೊಕೊವಿಚ್ ದಾಖಲೆಯ 21 ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಗೆದ್ದಂತಾಗುತ್ತದೆ. ಈ ಟೂರ್ನಿಯಲ್ಲಿ ಆಡಬೇಕಾದರೆ ಜೊಕೊವಿಚ್ ಮತ್ತು ತಂಡ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಆದರೆ ಅದಕ್ಕೆ ಜೊಕೊವಿಚ್ ನಿರಾಸಕ್ತಿ ತೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.