ನವದೆಹಲಿ: ‘ನಿರೀಕ್ಷೆಗೆ ತಕ್ಕಂತೆ ಸಾಮರ್ಥ್ಯ ತೋರಲು ಸಾಧ್ಯವಾಗದ ಕಾರಣ ಹೋದವರ್ಷವೇ ಕ್ರೀಡೆಯಿಂದ ದೂರ ಸರಿಯಲು ನಿರ್ಧರಿಸಿದ್ದೆ. ಆದರೆ ನನ್ನ ತಂದೆಯ ಪ್ರೇರಣೆಯ ನುಡಿಗಳಿಂದಾಗಿ ನಿರ್ಧಾರ ಬದಲಿಸಿದೆ. ಕ್ರೀಡೆಯಲ್ಲಿ ಮುಂದುವರೆದೆ’ ಎಂದು ಪ್ಯಾರಿಸ್ ಒಲಿಂಪಿಕ್ ಕೂಟಕ್ಕೆ ಅರ್ಹತೆ ಪಡೆದಿರುವ ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ಕಿಶೋರ್ ಜೇನಾ ಹೇಳಿದ್ದಾರೆ.

'ಶ್ರೀಲಂಕಾದಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಕೊನೆಯ ಬಾರಿಗೆ ನನ್ನ ಸಾಮರ್ಥ್ಯ ಪರೀಕ್ಷೆಗೊಡ್ಡಲು ನಿರ್ಧರಿಸಿದ್ದೆ. ವಿಫಲನಾದರೆ ಕೆಲಸಕ್ಕೆ ಮರಳಿ, ಕುಟುಂಬದೊಂದಿಗೆ ಇರಲು ತೀರ್ಮಾನಿಸಿದ್ದೆ. ಆದರೆ ದೇವದ ದಯೆ ಇತ್ತು. 84.38 ಮೀಟರ್ಸ್ ದೂರ ಥ್ರೋ ಮಾಡಿದ್ದೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗೆ ಆಯ್ಕೆಯಾಗಿದ್ದೆ’ ಎಂದು ಜೇನಾ ಜಿಯೊ ಸಿನಿಮಾ ‘ದ ಡ್ರೀಮರ್ಸ್’ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡರು.

‘ಟೋಕಿಯೊ ಒಲಿಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದಾಗ ಕುಣಿದಾಡಿದ್ದೆ. ಬಹಳ ಖುಷಿಯಿಂದ ಸಂಭ್ರಮಿಸಿದ್ದೆ. ಅದೇ ಸಂದರ್ಭದಲ್ಲಿ ನಾನು ಆಡುವ ಕ್ರೀಡೆಯಲ್ಲಿಯೇ ನೀರಜ್ ಸಾಧನೆ ಮಾಡಿದ್ದು ಬಹಳ ದೊಡ್ಡ ಪ್ರೇರಣೆಯಾಯಿತು. ನಾನು ಇದರಲ್ಲಿ ದೊಡ್ಡ ಸಾಧನೆ ಮಾಡುವ ಛಲ ಗರಿಗೆದರಿತು’ ಎಂದು ಹೇಳಿದರು.

ಜೇನಾ ಅವರು 2022ರವರೆಗೂ ಅವರು 80 ಮೀಟರ್ ದೂರ ಥ್ರೋ ಸಾಧನೆ ಮಾಡಿರಲಿಲ್ಲ. 2023ರಲ್ಲಿ ತಿರುವನಂತಪುರದಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾನ್ಪ್ರೀ ಅಥ್ಲೆಟಿಕ್ಸ್ನಲ್ಲಿ ಮೊದಲ ಬಾರಿಗೆ ಈ ಮಜಲು (81.05ಮೀ) ದಾಟಿದ್ದರು. ಬುಡಾಪೆಸ್ಟ್ನಲ್ಲಿ ಹೋದ ವರ್ಷ ನಡೆದಿದ್ದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಅವರು 85 ಮಿಟರ್ಸ್ ದೂರದ ಕ್ವಾಲಿಫಿಕೇಷನ್ ಮಟ್ಟವನ್ನು ತಲುಪುವಲ್ಲಿ ವಿಫಲರಾಗಿದ್ದರು.

‘ವಿಶ್ವ ಚಾಂಪಿಯನ್ಷಿಪ್ನಲ್ಲಿ (84.77 ಮೀ) ಮಾಡಿದ್ದೆ. ಐದನೇ ಸ್ಥಾನ ಪಡೆದಿದ್ದೆ. ನೀರಜ್ ಅಲ್ಲಿ ಚಿನ್ನ (88.17ಮೀ) ಜಯಿಸಿದ್ದರು. ಹಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ (87.54 ಮೀ) ನನ್ನ ವೈಯಕ್ತಿಕ ಶ್ರೇಷ್ಠ ಥ್ರೋ ಮಾಡಿದ್ದೆ. ಬೆಳ್ಳಿಯ ಜೊತೆಗೆ ಒಲಿಂಪಿಕ್ಸ್ ಪ್ರವೇಶವೂ ಲಭಿಸಿತು’ ಎಂದರು.

ಆದರೆ ಕಳೆದ ಆರು ಸ್ಪರ್ಧೆಗಳಲ್ಲಿ ಜೇನಾ ಅವರು ಒಂದು ಬಾರಿ ಮಾತ್ರ 80 ಮೀಟರ್ಸ್ ಥ್ರೋ ಮಾಡುವಲ್ಲಿ ಸಫಲರಾಗಿದ್ದಾರೆ. ಉಳಿದಂತೆ ಲಯ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ಈಛೇಘೇ ಫಂಚಕುಲಾದಲ್ಲಿ ನಡೆದಿದ್ದ ರಾಷ್ಟ್ರೀಯ ಅಂತರರಾಜ್ಯ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಜಯಿಸಿದ್ದರು. ಆ ಸ್ಪರ್ಧೆಯಲ್ಲಿ ಅವರು 80.84 ಮೀ ಥ್ರೋ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.