ಮುಂಬೈ: ಕರ್ನಾಟಕದ ಪಂಕಜ್ ಅಡ್ವಾಣಿ ಅವರು ಇಲ್ಲಿ ನಡೆಯುತ್ತಿರುವ ಜಿಎಸ್‌ಸಿ ವಿಶ್ವ ಸ್ನೂಕರ್ ಅರ್ಹತಾ ಟೂರ್ನಿಯಲ್ಲಿ ಅಗ್ರಸ್ಥಾನ ಗಳಿಸಿದರು. ಆಡಿದ ಎಲ್ಲ 12 ಪಂದ್ಯಗಳಲ್ಲೂ ಅವರು ಜಯಭೇರಿ ಬಾರಿಸಿದರು.

ಹಲವು ಬಾರಿ ಏಷ್ಯನ್ ಹಾಗೂ ವಿಶ್ವ ಸ್ನೂಕರ್ ಚಾಂಪಿಯನ್ ಆಗಿರುವ 36 ವರ್ಷದ ಪಂಕಜ್, ಇಲ್ಲಿ ಒಟ್ಟು 10,760 ಪಾಯಿಂಟ್ಸ್ ಕಲೆಹಾಕಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ಚಾಂಪಿಯನ್ ಆದಿತ್ಯ ಮೆಹ್ತಾ (10,156 ಪಾಯಿಂಟ್ಸ್) ಎರಡನೇ ಸ್ಥಾನ ಗಳಿಸಿದರೆ, ಲಕ್ಷ್ಮಣ್ ರಾವತ್, 9,396 ಪಾಯಿಂಟ್ಸ್‌ನೊಂದಿಗೆ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ಪಂಕಜ್ ಹಾಗೂ ಆದಿತ್ಯ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿದ್ದು, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ದೋಹಾದಲ್ಲಿ ನಡೆಯುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.