ನವದೆಹಲಿ: ಹೈಜಂಪ್ ಪಟು ತಂಗವೇಲು ಮರಿಯಪ್ಪನ್, ಮುಂಬರುವ ಪ್ಯಾರಾ ಏಷ್ಯನ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಪ್ಯಾರಾ ಏಷ್ಯನ್ ಕೂಟ ಅಕ್ಟೋಬರ್ 6ರಿಂದ 13ರವರೆಗೆ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯಲಿದೆ.

ಈ ಕೂಟದಲ್ಲಿ ಭಾರತದ ಒಟ್ಟು 302 ಮಂದಿ ಭಾಗವಹಿಸಲಿದ್ದಾರೆ. ಇದರಲ್ಲಿ ಅಥ್ಲೀಟ್‌ಗಳು, ಕೋಚ್ ಮತ್ತು ನೆರವು ಸಿಬ್ಬಂದಿ ಸೇರಿದ್ದಾರೆ.

ಸೋಮವಾರ ಜಕಾರ್ತ ತಲುಪಿದ ಭಾರತ ತಂಡದವರಿಗೆ ಕ್ರೀಡಾ ಗ್ರಾಮ ಪ್ರವೇಶ ನಿರ್ಬಂಧಿಸಲಾಯಿತು. ಕ್ರೀಡಾ ಸಚಿವಾಲಯ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿತು.

ತಂಗವೇಲು ಅವರು 2016ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.