ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಲೊ ಕಪ್‌: ಧೃವ್‌ಗೆ ಪ್ರಶಸ್ತಿ

Published 20 ಆಗಸ್ಟ್ 2024, 15:43 IST
Last Updated 20 ಆಗಸ್ಟ್ 2024, 15:43 IST
ಅಕ್ಷರ ಗಾತ್ರ

ಚೆನ್ನೈ: ಪ್ರತಿಷ್ಠಿತ ಪೋಲೊ ಕಪ್‌ 2024ರ ಚಾಂಪಿಯನ್‌ ಆಗಿ ಮುಂಬೈನ ಧೃವ್‌ ಚವಾಣ್‌ ಹೊರಹೊಮ್ಮಿದ್ದಾರೆ. ಅವರು ಆದಿತ್ಯ ಚವಾಣ್‌ ವಿರುದ್ಧ ರೋಚಕ ಗೆಲುವು ಸಾಧಿಸಿದರು.

ಕಳೆದ ವಾರಾಂತ್ಯದಲ್ಲಿ ನಡೆದ ಕಾರು ರೇಸ್‌ ರೋಚಕತೆಯಿಂದ ಕೂಡಿತ್ತು. ಅಂತಿಮ ಸುತ್ತಿಗೂ ಮುನ್ನ ಧೃವ್‌ ಹಾಗೂ ಆದಿತ್ಯ ನಡುವೆ ಕೇವಲ 1 ಅಂಕದ ಅಂತರವಿತ್ತು. ಆದರೆ, ಅಂತಿಮ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ ಧೃವ್‌ (183 ಅಂಕಗಳು), ಒಟ್ಟಾರೆ 4 ಅಂಕಗಳ ಅಂತರದಲ್ಲಿ ಆದಿತ್ಯರನ್ನು ಹಿಂದಿಕ್ಕಿದರು. ಓಜಸ್‌ ಸುರ್ವೆ 159 ಅಂಕಗಳೊಂದಿಗೆ 3ನೇ ಸ್ಥಾನ ಪಡೆದರು.

‘ನನ್ನ ಬಹುದಿನದ ಕಸನು ಈಗ ನನಸಾಗಿದೆ. ಗುರುವಾರ ನನ್ನ ಕಾರು ಪಲ್ಟಿಯಾಗಿ ಆಘಾತ ಎದುರಾಗಿತ್ತು. ರೇಸ್‌ಗಳ ವೇಳೆ ನನ್ನ ತಂದೆ ಆಸ್ಪತ್ರೆಯಲ್ಲಿದ್ದರು. ಆದರೆ, ನಾನು ಛಲ ಬಿಡದೆ ಗಮನ ಬೇರೆಡೆಗೆ ಜಾರದಂತೆ ಎಚ್ಚರವಹಿಸಿ ಗುರಿ ಸಾಧಿಸಿದ್ದೇನೆ’ ಎಂದು ಧೃವ್‌ ಹೇಳಿದರು.

ಮೊದಲ ಸುತ್ತು ಜುಲೈ 19ರಿಂದ 21ರವರೆಗೂ, 2ನೇ ಸುತ್ತು ಆಗಸ್ಟ್‌ 16ರಿಂದ 18ರವರೆಗೂ ನಡೆಯಿತು. ಈ ಸುತ್ತುಗಳಲ್ಲಿ ಅನುಭವಿ, ಯುವ ಹಾಗೂ ಉದಯೋನ್ಮುಖ ರೇಸ್‌ಗಳು ಪಾಲ್ಗೊಂಡರು.

ಮದ್ರಾಸ್‌ ಅಂತರರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆದ ಮೊದಲ ಸುತ್ತಿನ ಮೊದಲ ರೇಸ್‌ನಲ್ಲಿ ಆದಿತ್ಯ ಪಟ್ನಾಯಕ್‌ ಮುನ್ನಡೆ ಪಡೆದರು. ಆದರೆ, 2ನೇ ರೇಸ್‌ನಲ್ಲಿ ಧೃವ್‌ ಮುನ್ನಡೆಯೊಂದಿಗೆ ಸಮಬಲ ಸಾಧಿಸಿದ್ದರು. 

ರೋಮಿರ್‌ ಆರ್ಯ ಈ ಋತುವಿನ ಉದಯೋನ್ಮುಖ ತಾರೆ ಪ್ರಶಸ್ತಿ ಪಡೆದರೆ, ಮುಂಜಲ್‌ ಸಾಲ್ವಾ ಮಾಸ್ಟರ್‌ ಚಾಂಪಿಯನ್‌ಶಿಪ್‌ ಜಯಿಸಿದರು.

2025ರ ಪೋಲೊ ಕಪ್‌ನಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಚಾಲಕರು ಅ.5 ಹಾಗೂ 6 ರಂದು ಮುಂಬೈನಲ್ಲಿ ನಡೆಯಲಿರುವ ಆಯ್ಕೆ ಪ್ರಕ್ರಿಯೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT