ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಂಪಿಯನ್ಸ್‌ ಟ್ರೋಫಿ: ವೇಳಾಪಟ್ಟಿ ಚರ್ಚಿಸಲಿರುವ ಐಸಿಸಿ

Published : 11 ಸೆಪ್ಟೆಂಬರ್ 2024, 21:38 IST
Last Updated : 11 ಸೆಪ್ಟೆಂಬರ್ 2024, 21:38 IST
ಫಾಲೋ ಮಾಡಿ
Comments

ಕರಾಚಿ: ಚಾಂಪಿಯನ್ಸ್ ಟ್ರೋಫಿಗೆ ನಡೆದಿರುವ ಸಿದ್ಧತೆ ಪರಿಶೀಲಿಸಲು ಈ ತಿಂಗಳಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿರುವ ಐಸಿಸಿ ನಿಯೋಗವು, ಪಿಸಿಬಿ ಜೊತೆ ಈ ಟೂರ್ನಿಯ ಪ್ರಾಥಮಿಕ ವೇಳಾಪಟ್ಟಿಯ ಬಗ್ಗೆಯೂ ಚರ್ಚೆ ನಡೆಸಲಿದೆ.

ಐಸಿಸಿಯ ಎಷ್ಟು ಮಂದಿ ಬರಲಿದ್ದಾರೆ ಮತ್ತು ಅವರು ಯಾವ ವಿಭಾಗ ಪ್ರತಿನಿಧಿಸಲಿದ್ದಾರೆ ಎಂಬ ಬಗ್ಗೆ ಇದುವರೆಗೆ ಪಿಸಿಬಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ವೇಳಾಪಟ್ಟಿಯ ಬಗ್ಗೆ ವಿವರವಾದ ಚರ್ಚೆ ನಡೆಯಲಿದೆ ಎಂದು ಈ ಬೆಳವಣಿಗೆಯ ಮಾಹಿತಿಯಿರುವ ಮೂಲವೊಂದು ತಿಳಿಸಿದೆ.

ಪಿಸಿಬಿ ಕೆಲದಿನಗಳ ಹಿಂದೆಯೇ ಐಸಿಸಿಗೆ ತಾತ್ಕಾಲಿಕ ವೇಳಾಪಟ್ಟಿಯನ್ನು ಕಳುಹಿಸಿದೆ. ಅದರಲ್ಲಿ ಲಾಹೋರ್‌ಅನ್ನು ಭಾರತ ತಂಡದ ನೆಲೆಯನ್ನಾಗಿ ಗುರುತಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT