ಬ್ರಸೆಲ್ಸ್ : ಭಾರತದ ಅವಿನಾಶ್ ಸಾಬ್ಳೆ ಅವರು ವರ್ಷಾಂತ್ಯದ ಡೈಮಂಡ್ ಲೀಗ್ ಫೈನಲ್‌ನ 3000 ಮೀ. ಸ್ಟೀಪಲ್ ಚೇಸ್‌ಸ್ಪರ್ಧೆಯಲ್ಲಿ ಶುಕ್ರವಾರ ಅಷ್ಟೇನೂ ಉತ್ತಮ ಸಾಧನೆ ತೋರಲಿಲ್ಲ. ಅವರು 10 ಮಂದಿಯ ಕಣದಲ್ಲಿ ಒಂಬತ್ತನೇ ಸ್ಥಾನ ಪಡೆದರು.

ರಾಷ್ಟ್ರೀಯ ದಾಖಲೆ ಹೊಂದಿರುವ ಸಾಬ್ಳೆ, ತಮ್ಮ 30ನೇ ಹುಟ್ಟುಹಬ್ಬದ ದಿನ ನಡೆದ ಸ್ಪರ್ಧೆಯನ್ನು 8ನಿ.17.09 ಸೆ.ಗಳಲ್ಲಿ ಕ್ರಮಿಸಿದರು.

ಕೆನ್ಯಾದ ಅಮೊಸ್ ಸೆರೆಮ್, 8ನಿ.06.90 ಸೆ.ಗಳಲ್ಲಿ ಈ ದೂರ ಕ್ರಮಿಸಿ ಡೈಮಂಡ್ ಲೀಗ್ ಚಾಂಪಿಯನ್ ಆದರು. ಹಾಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್, ಮೊರಾಕೊದ ಸೌಫಿಯನ್ ಎಲ್.ಬೆಕ್ಕಲಿ (8:08.60) ಅವರು ಎರಡನೇ ಸ್ಥಾನ ಗಳಿಸಿದರು. ಟ್ಯುನೀಷಿಯಾದ ಮೊಹಮ್ಮದ್ ಅಮಿನ್ ಜಿನೊಯಿ (8:08.68) ಮೂರನೇ ಸ್ಥಾನ ಪಡೆದರು.

ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಸಾಬ್ಳೆ, ಇತ್ತೀಚಿನ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಈ ದೂರವನ್ನು 8ನಿ.14.18 ಸೆ.ಗಳಲ್ಲಿ ಪೂರೈಸಿ 11ನೇ ಸ್ಥಾನ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.