ನವದೆಹಲಿ: ಒಲಿಂಪಿಯನ್, 3000 ಮೀ. ಸ್ಟೀಪಲ್‌ಚೇಸ್ ಓಟಗಾರ ಅವಿನಾಶ ಸಾಬ್ಳೆ ಅವರು ಮೊದಲ ಬಾರಿ ಡೈಮಂಡ್ ಲೀಗ್ ಫೈನಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಾವೆಲಿನ್ ಥ್ರೊ ತಾರೆ ನೀರಜ್ ಚೋಪ್ರಾ ಅವರ ಜೊತೆ ಸಾಬ್ಳೆ ಇದೇ ತಿಂಗಳ 13 ಮತ್ತು 14ರಂದು ಜ್ಯೂರಿಚ್‌ನಲ್ಲಿ ನಡೆಯಲಿರುವ ಈ ಕೂಟದಲ್ಲಿ ಭಾಗವಹಿಸುತ್ತಿರುವ ಭಾರತದ ಎರಡನೇ ಸ್ಪರ್ಧಿಯಾಗಿದ್ದಾರೆ.

ಸಾಬ್ಳೆ ಡೈಮಂಡ್ ಲೀಗ್‌ನಲ್ಲಿ ಮೂರು ಪಾಯಿಂಟ್‌ಗಳೊಂದಿಗೆ ಒಟ್ಟಾರೆ 14ನೇ ಸ್ಥಾನ ಪಡೆದಿದ್ದರು. ಆದರೆ ಅವರಿಗಿಂತ ಮೇಲಿನ ಸ್ಥಾನದಲ್ಲಿದ್ದ ನಾಲ್ವರು ಫೈನಲ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದರಿಂದ ಸಾಬ್ಳೆ ಅವರಿಗೆ ಅವಕಾಶ ದೊರೆಯಿತು.

ಋತುವಿನ ಈ ಕೊನೆಯ ಕೂಟದಲ್ಲಿ ಸ್ಟೀಪಲ್‌ಚೇಸ್ ಸ್ಪರ್ಧೆ 13ರಂದು ಮತ್ತು ಜಾವೆಲಿನ್ ಥ್ರೊ ಸ್ಪರ್ಧೆ 14ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.