ನವದೆಹಲಿ: ಬಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಸಹ ಆಟಗಾರ ಪಾರುಪಳ್ಳಿ ಕಶ್ಯಪ್ ಅವರನ್ನು ವರಿಸಲಿದ್ದು, ಡಿಸೆಂಬರ್ 16ರಂದು ಇವರ ವಿವಾಹ ನಡೆಯಲಿದೆ.

ಕಶ್ಯಪ್ ಜತೆಗಿನ ವಿವಾಹ ದಿನಾಂಕ ತಿಳಿಸಿದ ಸೈನಾ, ಡಿಸೆಂಬರ್ 20ರಿಂದ ಆರಂಭವಾಗುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ನಾನು ಬ್ಯುಸಿಯಾಗಲಿದ್ದೇನೆ. ಆನಂತರ ಟೋಕಿಯೊ ಗೇಮ್ಸ್ ಅರ್ಹತಾ ಪಂದ್ಯ ಆರಂಭವಾಗಲಿದೆ.ಇದೆಲ್ಲದರ ನಡುವೆ ಮದುವೆಯಾಗಲು ಸಿಕ್ಕಿದ್ದು ಇದೊಂದೇ ತಾರೀಖು ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

2005ನೇ ಇಸವಿಯಿಂದ ಸೈನಾ ಮತ್ತು ಕಶ್ಯಪ್ ಪುಲ್ಲೇಲ ಗೋಪಿಚಂದ್ ಅವರ ತರಬೇತಿ ಕೇಂದ್ರದಲ್ಲಿಬ್ಯಾಡ್ಮಿಂಟನ್ ತರಬೇತಿ ಪಡೆಯುತ್ತಿದ್ದರು. ಕಳೆದ 10 ವರ್ಷದಿಂದ ಇವರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಲೇ ಇದ್ದವು.

2007- 2008ರಿಂದ ನಾವು ಪ್ರವಾಸ ಹೋಗುತ್ತಿದ್ದೆವು. ನಾವು ಜತೆಯಾಗಿ ಪಂದ್ಯಗಳನ್ನಾಡಿದ್ದೇವೆ. ಜತೆಯಾಗಿ ತರಬೇತಿ ಪಡೆದಿದ್ದೇವೆ.ಕ್ರಮೇಣ ನಾವಿಬ್ಬರೂ ಪರಸ್ಪರ ಪಂದ್ಯಗಳತ್ತ ಹೆಚ್ಚು ಗಮನ ನೀಡ ತೊಡಗಿದೆವು.ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾರೊಂದಿಗೂ ತುಂಬಾ ಆಪ್ತವಾಗುವುದು ಕಷ್ಟವಿದೆ.ಆದರೆ ನಾವಿಬ್ಬರೂ ಸುಲಭವಾಗಿ ಬೆರೆತೆವು. ನಮ್ಮ ಪಂದ್ಯಗಳ ಬಗ್ಗೆ ಮಾತನಾಡ ತೊಡಗಿದೆವು, ನಮ್ಮ ನಡುವಿನ ಬಾಂಧವ್ಯ ಗಟ್ಟಿಯಾಗುತ್ತಾ ಹೋಯಿತು.

ಈ ಹಿಂದೆ ನಾವು ಮದುವೆ ಬಗ್ಗೆ ಯೋಚಿಸಿಲ್ಲ.ನಮ್ಮ ವೃತ್ತಿ ಬಗ್ಗೆ ಗಮನ ನೀಡಬೇಕಾಗಿತ್ತು. ಪಂದ್ಯಗಳನ್ನು ಗೆಲ್ಲುವುದು ಮುಖ್ಯ. ಹಾಗಾಗಿ ನಾವು ಮದುವೆ ಬಗ್ಗೆ ಹೆಚ್ಚು ಗಮನ ನೀಡಲಿಲ್ಲ ಎಂದು ಸೈನಾ ಹೇಳಿದ್ದಾರೆ.

ಈಗ ಕೊರಿಯಾ ಓಪನ್ ಪಂದ್ಯವನ್ನಾಡುತ್ತಿರುವ ಸೈನಾ 20 ಕಿರೀಟಗಳನ್ನು ಗೆದ್ದಿದ್ದಾರೆ. ಒಲಿಂಪಿಕ್ಸ್ ನಲ್ಲಿ ಕಂಚು ಮತ್ತು ವಿಶ್ವ ಚಾಂಪಿಯನ್ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಕಶ್ಯಪ್ ವಿಶ್ವ ನಂಬರ್ 6 ಆಟಗಾರರಾಗಿದ್ದಾರೆ.

ಒಂದು ಮಗುವಿಗೆ ನೀಡುವ ಆರೈಕೆ ಮತ್ತು ಗಮನ ಆಟಗಾರರಿಗೆ ಬೇಕು.ಮನೆಯಲ್ಲಿ ಇದೆಲ್ಲಾ ಸಿಕ್ಕಿಬಿಡುತ್ತದೆ. ಆದರೆ ಮದುವೆಯಾದಾಗ ಇದೆಲ್ಲಾ ಬದಲಾಗುತ್ತದೆ.ನನಗೇನು ಬೇಕೋ ಅದನ್ನೆಲ್ಲಾ ನಾನೇ ಮಾಡಬೇಕಾದ ಹೊಣೆ ನನಗಿರುತ್ತದೆ. ಸಿಡಬ್ಲ್ಯುಜಿ ಮತ್ತು ಏಷ್ಯನ್ ಗೇಮ್ಸ್ ಗಿಂತ ಮುನ್ನ ಎಲ್ಲವನ್ನೂ ತರಾತುರಿಯಲ್ಲಿ ಮಾಡಬೇಕೆಂದು ನಾನು ಬಯಸಿಲ್ಲ.ಆದರೆ ಈಗ ನಾವು ಮದುವೆಗೆ ಸಿದ್ಧವಾಗಿದ್ದೇವೆ.ನಮ್ಮ ಕಾರ್ಯಗಳನ್ನು ನಿಭಾಯಿಸಬಲ್ಲೆವು ಎಂಬ ಆತ್ಮ ವಿಶ್ವಾಸ ಇದೆ.

ಮನೆಯವರಿಗೆ ಪ್ರೀತಿಯ ವಿಷಯವನ್ನು ಹೇಳಬೇಕಾದ ಅಗತ್ಯವೇ ಬರಲಿಲ್ಲ.ನಾವಿಬ್ಬರೂ ಹೆಚ್ಚಿನ ಸಮಯ ಜತೆಯಾಗಿಯೇ ಇರುತ್ತಿದ್ದೆವು. ನನ್ನ ಹೆತ್ತವರೂ ನನ್ನೊಂದಿಗೇ ಪ್ರಯಾಣ ಮಾಡುತ್ತಿದ್ದರು.ಹಾಗಾಗಿ ನಾನು ಯಾರೊಂದಿಗೆ ಆಪ್ತವಾಗಿದ್ದೇನೆ.ಪಂದ್ಯ ಸೋತರೂ ನಾನು ಯಾರೊಂದಿಗೆ ನಿರಾಳವಾಗಿರುತ್ತೇನೆ ಎಂಬುದು ಅವರಿಗೆ ಗೊತ್ತು ಎಂದು ತಮ್ಮ ಹೆತ್ತವರ ಬಗ್ಗೆ ಸೈನಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.