ನವದೆಹಲಿ: ವಿನೇಶಾ ಪೋಗಟ್ ಹಾಗೂ ಅನ್ಷು ಮಲಿಕ್ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಕಂಚಿನ ಪದಕಗಳಿಗೆ ಮುತ್ತಿಟ್ಟರು.

ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದ ಕೆ.ಡಿ.ಜಾಧವ್ ಸಭಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ವಿನೇಶಾ ಹಾಗೂ ಅನ್ಷು ಕ್ರಮವಾಗಿ 53 ಹಾಗೂ 57 ಕೆಜಿ ವಿಭಾಗಗಳಲ್ಲಿ ಎದುರಾಳಿಗಳ ಸವಾಲು ಮೀರಿದರು. ಕಂಚಿನ ಪದಕದ ಸುತ್ತಿನಲ್ಲಿ ವಿನೇಶಾ. ವಿಯೆಟ್ನಾಂನ ಥಿ ಲಿ ಕಿವ್ ಎದುರು 10–0ಯಿಂದ ಗೆದ್ದರೆ, ಅನ್ಷು ಅವರು ಉಜ್ಬೆಕಿಸ್ತಾನದ ಸೆವಾರಾ ಎಷ್ಮುರತೊವಾ ಅವರನ್ನು ಮಣಿಸಿದರು.

ಕ್ವಾರ್ಟರ್‌ಫೈನಲ್‌ನಲ್ಲಿವಿನೇಶಾ ಪೊಗಟ್ ಅವರಿಗೆ ಜಪಾನ್‌ನ ‘ಹಳೆಯ ಎದುರಾಳಿ’ ಮಯು ಮುಖೈಡೊ ಮತ್ತೊಮ್ಮೆ ಒಗಟಾದರು. ಜಪಾನ್‌ನ ಸ್ಪರ್ಧಿ 6–2 ರಿಂದ ವಿನೇಶಾ ಮೇಲೆ ಜಯಗಳಿಸಿದರು. ಅನ್ಷು ಮಲಿಕ್ ಅವರು ಮೊದಲ ಸುತ್ತಿನ ಹಣಾಹಣಿಯಲ್ಲಿ ಕಿರ್ಗಿಸ್ತಾನದ ನುರೈದಾ ಅನರ್ಕುಲೊವಾ ಎದುರು ತಾಂತ್ರಿಕ ಶ್ರೇಷ್ಠತೆ ಆಧಾರದಲ್ಲಿ ಗೆದ್ದರು. ಆದರೆ ಹಾಲಿ ವಿಶ್ವಚಾಂಪಿಯನ್ ಜಪಾನ್‌ನ ರಿಸ್ಕಾವೊ ಕವಾಯಿ ಎದುರು ಸೋತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.