ಪ್ಯಾರಿಸ್: ಭಾರತದ ಪಿ.ವಿ. ಸಿಂಧು, ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ಫೈನಲ್ನಲ್ಲಿ ಹೊರಬಿದ್ದರು. ಆ ಮೂಲಕ ಇತ್ತೀಚಿನ ಟೂರ್ನಿಯ ವೈಫಲ್ಯಗಳ ಸುಳಿಯಿಂದ ಹೊರಬರಲು ವಿಫಲರಾದರು.

ಐದನೇ ಶ್ರೇಯಾಂಕದ ಭಾರತದ ಆಟಗಾರ್ತಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ 16–21, 26–24, 17–21 ರಿಂದ ಅಗ್ರ ಶ್ರೇಯಾಂಕ ಆಟಗಾರ್ತಿ, ಚೀನಾ ತೈಪಿಯ ತೈ ತ್ಜು ಯಿಂಗ್ ಅವರಿಗೆ ಮಣಿದರು. ಸಿಂಧು ಈ ಆಟಗಾರ್ತಿಗೆ ಸೋಲುತ್ತಿರುವುದು ಇದು ಹತ್ತನೇ ಬಾರಿಯಾಗಿದೆ. ಅವರು ಭಾರತದ ಆಟಗಾರ್ತಿ ವಿರುದ್ಧ 10–5 ಗೆಲುವಿನ ದಾಖಲೆ ಹೊಂದಿದ್ದಾರೆ.

ಸ್ವಿಜರ್ಲೆಂಡ್ನ ಬಾಸೆಲ್ನಲ್ಲಿ ವಿಶ್ವ ಚಾಂಪಿಯನ್ಷಿಪ್ ಗೆದ್ದ ನಂತರ ಸಿಂಧು ಬೇಗನೇ ನೀರ್ಗಮಿಸುತ್ತಿರುವ ಸತತ ನಾಲ್ಕನೇ ಟೂರ್ನಿ ಇದಾಗಿದೆ. ಅವರು ಕಳೆದ ತಿಂಗಳು ಕೊರಿಯಾ ಓಪನ್ನ ಮೊದಲ ಸುತ್ತಿನಲ್ಲಿ ಹೊರಬಿದ್ದಿದ್ದರು. ಆನಂತರ ಅವರು ಲಯಕ್ಕೆ ಮರಳಲು ಪರದಾಡುತ್ತಿದ್ದಾರೆ.

ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ –ಚಿರಾಗ್ ಶೆಟ್ಟಿ ಜೋಡಿ ಸೆಮಿಫೈನಲ್ಗೆ ಮುನ್ನಡೆದಿದ್ದು, ಭಾರತದ ಸವಾಲನ್ನು ಜೀವಂತವಾಗುಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.