ಒಡೆನ್ಸ್: ಹಿನ್ನಡೆಯಿಂದ ಚೇತರಿಸಿಕೊಂಡ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು, ವಿಶ್ವದ ಏಳನೇ ಕ್ರಮಾಂಕದ ಆಟಗಾರ್ತಿ ಹಾನ್ ಹ್ಯು ಮೇಲೆ ಜಯಗಳಿಸಿ ಡೆನ್ಮಾರ್ಕ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ಫೈನಲ್ಗೆ ಮುನ್ನಡೆದರು.

ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ 18ನೇ ಕ್ರಮಾಂಕದ ಸಿಂಧು 18–21, 21–12, 21–16 ರಿಂದ ಮಾಜಿ ವಿಶ್ವ ಚಾಂಪಿಯನ್ ಹಾನ್ ಹ್ಯು ಅವರನ್ನು ಹಿಮ್ಮೆಟ್ಟಿಸಿದರು. ಪಂದ್ಯ 63 ನಿಮಿಷ ನಡೆಯಿತು.

ಮೇ ತಿಂಗಳು ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಇದೇ ಆಟಗಾರ್ತಿಯನ್ನು ಸೋಲಿಸಿದ ನಂತರ ಇದು ವಿಶ್ವದ ಅಗ್ರ 10ರಲ್ಲಿರುವ ಆಟಗಾರ್ತಿಯೊಬ್ಬರ ಮೇಲೆ ಸಿಂಧು ಸಾಧಿಸಿದ ಮೊದಲ ಗೆಲುವಾಗಿದೆ.

ತನ್ಮೂಲಕ ಸಿಂಧು, ಹಾನ್ ವಿರುದ್ಧ ಎಂಟು ಮುಖಾಮುಖಿಯಲ್ಲಿ ಏಳನೇ ಬಾರಿ ಗೆದ್ದಂತಾಯಿತು.

ಭಾರತದ ಆಟಗಾರ್ತಿ ಕ್ವಾರ್ಟರ್ಫೈನಲ್ನಲ್ಲಿ ಇಂಡೊನೇಷ್ಯಾದ ಜಾರ್ಜಿಯಾ ಮರಿಸ್ಕಾ ತುಂಜುಂಗ್ ಅಥವಾ ಡೆನ್ಮಾರ್ಕ್ನ ಮಿಯಾ ಬ್ಲಿಚ್ಫೆಲ್ಟ್ ಅವರನ್ನು ಎದುರಿಸಲಿದ್ದಾರೆ. ಮರಿಸ್ಕಾ ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.

ಈ ಟೂರ್ನಿಯಲ್ಲಿ ಸಿಂಧು ಅವರನ್ನು ಬಿಟ್ಟರೆ ಸಿಂಗಲ್ಸ್, ಡಬಲ್ಸ್ನಲ್ಲಿ ಭಾರತದ ಉಳಿದ ಸ್ಪರ್ಧಿಗಳು ಹೊರಬಿದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.