ನವದೆಹಲಿ: ಭಾರತದ ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ಅವರು ಅಮೆರಿಕದಲ್ಲಿ ನಡೆಯಲಿರುವ ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್‌ನಿಂದ ಹಿಂದೆ ಸರಿದಿದ್ದಾರೆ. ಹಾಂಗ್‌ಝೌ ಏಷ್ಯನ್ ಕ್ರೀಡಾಕೂಟದತ್ತ ಗಮನಹರಿಸಲು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಡೈಮಂಡ್ ಲೀಗ್ ಫೈನಲ್ ಅಮೆರಿಕದ ಯೂಜಿನ್‌ನಲ್ಲಿ ಸೆ.17 ರಂದು ನಡೆಯಲಿದೆ. ಏಷ್ಯನ್ ಕ್ರೀಡಾಕೂಟ ಸೆ.23 ರಂದು ಆರಂಭವಾಗಲಿದೆ.

‘ಡೈಮಂಡ್ ಲೀಗ್‌ನಲ್ಲಿ ಪಾಲ್ಗೊಂಡು ಚೀನಾದ ಹಾಂಗ್‌ಝೌಗೆ ಬರಬೇಕಾದರೆ ದೀರ್ಘ ಪ್ರಯಾಣ ಅಗತ್ಯ. ಅದು ದೈಹಿಕ ಸಾಮರ್ಥ್ಯ ಮತ್ತು ತರಬೇತಿಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಅಮೆರಿಕಕ್ಕೆ ತೆರಳದಿರಲು ನಿರ್ಧರಿಸಿದ್ದಾರೆ’ ಎಂದು ಶ್ರೀಶಂಕರ್ ಅವರ ತಂದೆ ಮುರಳಿ ತಿಳಿಸಿದರು.

ಆ.31 ರಂದು ನಡೆದಿದ್ದ ಜ್ಯೂರಿಚ್ ಲೆಗ್‌ನ ಡೈಮಂಡ್ ಲೀಗ್‌ನಲ್ಲಿ 7.99 ಮೀ. ಸಾಧನೆಯೊಂದಿಗೆ ಐದನೇ ಸ್ಥಾನ ಪಡೆದಿದ್ದರೂ, ಶ್ರೀಶಂಕರ್ ಅವರು ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.