ಅಬುಧಾಬಿ: ಭಾರತದ ಶ್ರೀಹರಿ ನಟರಾಜ್ ಅವರು ಫಿನಾ ಶಾರ್ಟ್ಕೋರ್ಸ್ ವಿಶ್ವ ಈಜು ಚಾಂಪಿಯನ್ಷಿಪ್ನಲ್ಲಿ ದಾಖಲೆಯ ಓಟವನ್ನು ಮುಂದುವರಿಸಿದ್ದಾರೆ.

ಇಲ್ಲಿ ನಡೆಯುತ್ತಿರುವ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಈಜುಪಟು ಮೂರನೇ ಬಾರಿ ‘ಭಾರತದ ಶ್ರೇಷ್ಠ ಸಮಯ‘ ದಾಖಲಿಸಿದರು.

ಒಲಿಂಪಿಯನ್, 20 ವರ್ಷದ ಶ್ರೀಹರಿ 100 ಮೀಟರ್ಸ್ ಫ್ರೀಸ್ಟೈಲ್ ವಿಭಾಗದಲ್ಲಿ 48.65 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಆ ಮೂಲಕ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಸಜನ್ ಪ್ರಕಾಶ್ ನಿರ್ಮಿಸಿದ್ದ ದಾಖಲೆಯನ್ನು ಮೀರಿದರು. ಆದರೆ ಈ ವಿಭಾಗದ ಹೀಟ್ಸ್ನಲ್ಲಿ ಒಟ್ಟಾರೆ 38ನೇ ಸ್ಥಾನ ಗಳಿಸಿದ ಶ್ರೀಹರಿ ಸೆಮಿಫೈನಲ್ ತಲುಪುವಲ್ಲಿ ವಿಫಲರಾದರು.

ಅಗ್ರ 16 ಈಜುಪಟುಗಳಿಗೆ ಮಾತ್ರ ಸೆಮಿಫೈನಲ್ ಪ್ರವೇಶದ ಅವಕಾಶ ಇತ್ತು.

ಶ್ರೀಹರಿ ಕಳೆದ ವಾರ 50 ಮೀ. ಮತ್ತು 100 ಮೀ. ಬ್ಯಾಕ್ಸ್ಟ್ರೋಕ್ ವಿಭಾಗಗಳಲ್ಲಿ ‘ಭಾರತದ ಶ್ರೇಷ್ಠ ಸಮಯ‘ ದಾಖಲಿಸಿದ್ದರು.

1500 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಕುಶಾಗ್ರ ರಾವತ್ 15 ನಿಮಿಷ 7.86 ಸೆಕೆಂಡುಗಳಲ್ಲಿ ಗುರಿ ಮುಟ್ಟಿ 21ನೇ ಸ್ಥಾನ ಗಳಿಸಿದರು.

ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ದಾಖಲಾಗುವ ಸಮಯವನ್ನು ರಾಷ್ಟ್ರೀಯ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇತರ ಕೂಟಗಳಲ್ಲಿ ದಾಖಲಿಸುವ ಸಮಯವನ್ನು ‘ಭಾರತದ ಶ್ರೇಷ್ಠ ಸಮಯ‘ ಎಂದು ಕರೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.