ನವದೆಹಲಿ: ಒಲಿಂಪಿಯನ್ ಈಜುಪಟು ಭಾರತದ ಮಾನಾ ಪಟೇಲ್ ಅವರು ಫ್ರಾನ್ಸ್‌ನಲ್ಲಿ ನಡೆದ ಮೇರ್ ನಾಸ್ಟಮ್ ಕ್ಯಾನೆಟ್ ಲೆಗ್ ಈಜು ಕೂಟದ 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ‘ಭಾರತದ ಶ್ರೇಷ್ಠ ಸಮಯ‘ ದಾಖಲಿಸಿದ್ದಾರೆ.

ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ 22 ವರ್ಷದ ಮಾನಾ, ಭಾನುವಾರ 1 ನಿಮಿಷ 3.69 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಇದರೊಂದಿಗೆ ತಮ್ಮದೇ ಹೆಸರಿನಲ್ಲಿದ್ದ ‘ಭಾರತದ ಶ್ರೇಷ್ಠ ಸಮಯ‘ವನ್ನು ಉತ್ತಮಪಡಿಸಿಕೊಂಡರು. ಕಳೆದ ವರ್ಷ ಬೆಲ್‌ಗ್ರೇಡ್ ಕೂಟದಲ್ಲಿ ಅವರು 1 ನಿ. 3.77 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು.

ಫ್ರಾನ್ಸ್ ಈಜು ಕೂಟದಲ್ಲಿ ಒಟ್ಟಾರೆ 15ನೆಯವರಾಗಿ ಗುರಿ ಮುಟ್ಟಿ ಬಿ ಫೈನಲ್‌ಗೆ ಅರ್ಹತೆ ಗಳಿಸಿದ್ದರು. ಫೈನಲ್‌ನಲ್ಲಿ 1 ನಿ. 3.87 ಸೆಕೆಂಡುಗಳ ಸಾಧನೆ ಮಾಡಿದರು.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ದಾಖಲಾಗುವ ಸಮಯವನ್ನು ರಾಷ್ಟ್ರೀಯ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇತರ ಕೂಟಗಳಲ್ಲಿ ದಾಖಲಿಸುವ ಸಮಯವನ್ನು ‘ಭಾರತದ ಶ್ರೇಷ್ಠ ಸಮಯ‘ ಎಂದು ಕರೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.