ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿನವ್‌ಗೆ ಪ್ರಶಸ್ತಿ; ತನಿಷ್ಕಾಗೆ ‘ಹ್ಯಾಟ್ರಿಕ್‌’

ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್‌ ಟೂರ್ನಿ: ಅರ್ಣವ್ ಮಿಥುನ್‌, ಆದ್ಯಾ ‘ಹೋಪ್ಸ್‌’ ವಿಜೇತರು
Published : 7 ಜುಲೈ 2024, 15:14 IST
Last Updated : 7 ಜುಲೈ 2024, 15:14 IST
ಫಾಲೋ ಮಾಡಿ
Comments

ಮಂಗಳೂರು: ಸತತ ಮೂರು ದಿನ ಮಿಂಚಿದ ಬೆಳಗಾವಿಯ ತನಿಷ್ಕಾ ಕಪಿಲ್ ಕಾಲಭೈರವ್ ಇಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ‘ಹ್ಯಾಟ್ರಿಕ್’ ಸಾಧನೆಯೊಂದಿಗೆ ಸಂಭ್ರಮಿಸಿದರು. 

ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ನಗರದ ಕಂಕನಾಡಿಯ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಟೂರ್ನಿಯ 17, 15 ಮತ್ತು 13 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅವರು ಚಾಂಪಿಯನ್ ಆದರು. 

ಭಾನುವಾರ ನಡೆದ 13 ವರ್ಷದೊಳಗಿನವರ ಫೈನಲ್‌ನಲ್ಲಿ ತನಿಷ್ಕಾ 11–1, 11-3, 11-1ರಲ್ಲಿ ಐರಿನ್‌ ಅನಾ ಎದುರು ಜಯ ಸಾಧಿಸಿದರು. ಇದೇ ವಯೋಮಾನದ ಬಾಲಕರ ವಿಭಾಗದಲ್ಲಿ ಅಭಿನವ್ ಪ್ರಸನ್ನ 6-11, 11-4, 5-11, 14-12, 11-2ರಲ್ಲಿ ಶ್ರೀರಾಮ್ ಕಿರಣ್ ವಿರುದ್ಧ ಗೆದ್ದರು. ಶನಿವಾರ ರಾತ್ರಿ ನಡೆದ 15 ವರ್ಷದೊಳಗಿನ ಬಾಲಕರ ಫೈನಲ್‌ನಲ್ಲಿ ಅರ್ಣವ್‌ 11-6, 11-5, 5-11, 11-8ರಲ್ಲಿ ಅಥರ್ವ ನವರಂಗೆ ಅವರನ್ನು ಮಣಿಸಿದರು.

ಭಾನುವಾರ ನಡೆದ 11 ವರ್ಷದೊಳಗಿನ ಹೋಪ್ಸ್‌ ಬಾಲಕರ ವಿಭಾಗದಲ್ಲಿ ಅರ್ಣವ್ ಮಿಥುನ್ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ ಅವರು ಸುಚೇತ್ ಧರೆಣ್ಣವರ್‌ ಎದುರು 4-11, 11–5, 13-11, 8-11, 11-5ರಲ್ಲಿ ಜಯಿಸಿದರು. ಬಾಲಕಿಯರ ವಿಭಾಗದ ಪ್ರಶಸ್ತಿ ಆದ್ಯಾ ಎಂ ಪಾಲಾಯಿತು. ಪ್ರಶಸ್ತಿ ಸುತ್ತಿನಲ್ಲಿ ಅವರು ಸೃಷ್ಟಿ ಧರಿವಾಲ್ ವಿರುದ್ಧ 11-8, 11-7, 11-9ರಲ್ಲಿ ಗೆಲುವು ಸಾಧಿಸಿದರು.

‌ಫಲಿತಾಂಶಗಳು:

15 ವರ್ಷದೊಳಗಿನ ಬಾಲಕರ ಫೈನಲ್‌: ಅಥರ್ವ ನವರಂಗೆ ವಿರುದ್ಧ 11-6,11-5,5-11,11-8ರಲ್ಲಿ ಅರ್ಣವ್‌ ಎನ್‌ ಜಯಭೇರಿ. ಸೆಮಿಫೈನಲ್‌: ಅರ್ಣವ್‌ಗೆ ಸಿದ್ಧಾಂತ್ ಧರಿವಾಲ್‌ ವಿರುದ್ಧ 9-11,12-10,11-4,11-5ರಲ್ಲಿ, ಅಥರ್ವ ನವರಂಗೆಗೆ ಗೌರವ್ ಗೌಡ ವಿರುದ್ಧ 11-7,7-11,11-7,12-14, 12-10ರಲ್ಲಿ ಗೆಲುವು.

13 ವರ್ಷದೊಗಳಗಿನ ಬಾಲಕರ ಫೈನಲ್‌: ಅಭಿನವ್ ಪ್ರಸನ್ನಗೆ ಶ್ರೀರಾಮ್ ಕಿರಣ್‌ ವಿರುದ್ಧ 6-11,11-4,5-11,14-12,11-2ರಲ್ಲಿ ಜಯ. ಸೆಮಿಫೈನಲ್‌:  ಅಭಿನವ್‌ಗೆ ಸುಧನ್ವ ರಾವ್ ವಿರುದ್ಧ 11-5,11-7,6-11,11-8ರಲ್ಲಿ, ಶ್ರೀರಾಮ್ ಕಿರಣ್‌ಗೆ ಸಿದ್ಧಾಂತ್ ವಿರುದ್ಧ 11-6,8-11,11-7,7-11,12-10ರಲ್ಲಿ ಜಯ.

13 ವರ್ಷದೊಳಗಿನ ಬಾಲಕಿಯರ ಫೈನಲ್‌: ತನಿಷ್ಕಾಗೆ ಐರಿನ್‌ ಅನಾ ವಿರುದ್ಧ 11-1,11-3,11-1ರಲ್ಲಿ ಜಯ. ಸೆಮಿಫೈನಲ್‌: ತನಿಷ್ಕಾಗೆ ಮಿಹಿಕಾ ಉಡುಪ ವಿರುದ್ಧ 11-4,11-6,11-1ರಲ್ಲಿ, ಐರಿನ್ ಅನಾಗೆ ದೀಕ್ಷಿತಾ ನಾಯ್ಕ್‌ ವಿರುದ್ಧ 11-8,12-10,11-4ರಲ್ಲಿ ಜಯ. ಹೋಪ್ಸ್ ಬಾಲಕರ ಫೈನಲ್‌: ಅರ್ಣವ್‌ ಮಿಥುನ್‌ಗೆ ಸುಚೇತ್ ವಿರುದ್ಧ 4-11,11-5,13-11,8-11, 11-5ರಲ್ಲಿ ಜಯ. ಸೆಮಿಫೈನಲ್‌: ಅರ್ಣವ್‌ಗೆ ಧ್ರುವ್‌ ವಿರುದ್ಧ 11-4,11-4,11-6ರಲ್ಲಿ, ಸುಚೇತ್‌ಗೆ ಅಂಕುಷ್‌ ಬಾಳಿಗಾ ವಿರುದ್ಧ 10-12,11-7,11-9,11-3ರಲ್ಲಿ ಗೆಲುವು. ಹೋಪ್ಸ್ ಬಾಲಕಿಯರ ಫೈನಲ್‌: ಆದ್ಯಾಗೆ ಸೃಷ್ಟಿ ಧರಿವಾಲ್‌ ವಿರುದ್ಧ 11-8,11-7,11-9ರಲ್ಲಿ ಜಯ. ಸೆಮಿಫೈನಲ್‌: ಆದ್ಯಾಗೆ ಸಾಕ್ಷ್ಯ ವಿರುದ್ಧ 13-11,5-11,11-7,4-11,12-10ರಲ್ಲಿ, ಸೃಷ್ಟಿಗೆ ಏಂಜೆಲಿನಾ ಕ್ರಿಸ್ಟಿ ವಿರುದ್ಧ 11-6,11-7,11-3ರಲ್ಲಿ ಜಯ.

ಅರ್ಣವ್ ಆಟದ ಭಂಗಿ -ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಅರ್ಣವ್ ಆಟದ ಭಂಗಿ -ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT